ಕಾಂತಾರ (Kantara) ಪ್ರೀಕ್ವೆಲ್ ಸಿನಿಮಾದ ಕುರಿತಂತೆ ಅಂತೆಕಂತೆ ಸುದ್ದಿಗಳೇ ಜಾಸ್ತಿ ಹರಿದಾಡುತ್ತಿವೆ. ಇದೇ ಮೊದಲ ಬಾರಿಗೆ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಸಿನಿಮಾ ಕುರಿತಂತೆ ಹಲವಾರು ವಿಷಯಗಳನ್ನು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
- Advertisement -
ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿರುವ ರಿಷಬ್ ಶೆಟ್ಟಿ, ಬೆಂಗಳೂರಿಗೆ ಆಗಮಸಿದ್ದಾರೆ. ಅವರ ನಿರ್ಮಾಣದ ಶಿವಮ್ಮ ಸಿನಿಮಾ ರಿಲೀಸ್ ಹೊತ್ತಲ್ಲಿ ಕಾಣಿಸಿಕೊಂಡಿರುವ ಅವರು ಸಿನಿಮಾ ಕುರಿತಂತೆ ಹತ್ತು ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
- Advertisement -
- Advertisement -
ಮೊದಲ ಹಂತದ ಬಹುತೇಕ ಚಿತ್ರೀಕರಣ ಕಾಂತಾರಕ್ಕಾಗಿ ಹಾಕಿರುವ ಬಹೃತ್ ಸೆಟ್‌ನಲ್ಲೇ ಮುಗಿಸಿದ್ದಾರೆ. ಸ್ಥಳೀಯ ಕಲಾವಿದರು ಮತ್ತು ಕೆಲವು ಪ್ರಮುಖ ಪಾತ್ರಧಾರಿಗಳ ಜೊತೆ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ರಿಷಬ್ ಶೆಟ್ಟಿ, ಮಲಯಾಳಂ ನಟ ಜಯರಾಮ್ ಸೇರಿದಂತೆ ಹಲವು ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
- Advertisement -
ನಾಯಕಿಯ ಕುರಿತಂತೆ ಮಾತನಾಡಿದ ರಿಷಬ್, ಇನ್ನೂ ನಾಯಕಿ ಫಿಕ್ಸ್ ಆಗಿಲ್ಲ. ಹಲವು ನಾಯಕಿಯರನ್ನು ಶೂಟಿಂಗ್ ಸೆಟ್ ನಲ್ಲಿ ಕರೆಯಿಸಿಕೊಂಡು ಲುಕ್ ಟೆಸ್ಟ್ ಮಾಡಿದ್ದೇವೆ. ಸಿನಿಮಾದಲ್ಲಿ ಖಂಡಿತಾ ನಾಯಕಿ ಇರುತ್ತಾಳೆ. ಆದರೆ, ಇನ್ನೂ ನಾಯಕಿಯ ಚಿತ್ರೀಕರಣದ ಹಂತಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ನಾಯಕಿಯ ಆಯ್ಕೆ ನಡೆಯಲಿದೆ ಅಂದಿದ್ದಾರೆ ರಿಷಬ್.
ಈ ನಡುವೆ ತಮ್ಮೂರಿನ ಶಾಲೆಯನ್ನು ಸುಂದರಗೊಳಿಸಿದ್ದಾರೆ ರಿಷಬ್. ಅಲ್ಲದೇ, ಕಟ್ಟಡದ ವಿನ್ಯಾಸವನ್ನೇ ಬದಲಾಯಿಸಿದ್ದಾರೆ. ಅವರೇ ಶಾಲೆಗೆ ಶಿಕ್ಷಕರನ್ನೂ ಒದಗಿಸಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಪ್ರವೇಶಾತಿ ಪಡೆದಿದ್ದಾರಂತೆ. ಕಾಂತಾರದ ಜೊತೆ ಜೊತೆ ಆ ಕೆಲಸವನ್ನೂ ಮಾಡಿದ ತೃಪ್ತಿ ನನಗಿದೆ ಅಂತಾರೆ ರಿಷಬ್.