ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ‘ಕಾಂತಾರ’ (Kantara) ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಕಾಂತಾರ ಪಾರ್ಟ್ 2ಗೆ ಎದುರು ನೋಡ್ತಿರುವ ಸಂದರ್ಭದಲ್ಲಿ ‘ಕಾಂತಾರ’ ಚಿತ್ರದಲ್ಲಿ ಧರಿಸಿದ್ದ 32 ವರ್ಷ ಹಳೆಯ ಸೀರೆ ಬಗ್ಗೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ರಿವೀಲ್ ಮಾಡಿದ್ದಾರೆ. ಸದ್ಯ ಪ್ರಗತಿ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಪತ್ನಿ ಪ್ರಗತಿ ಅವರು ರಾಜನ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ರಾಣಿಯಾಗಿ ಪ್ರಗತಿ ಶೆಟ್ಟಿ ಪಾತ್ರದಲ್ಲಿ ನಟಿಸಿದ್ದರು. ಚಿಕ್ಕ ಪಾತ್ರವಾಗಿದ್ದರು ಪ್ರಗತಿ ಗಮನ ಸೆಳೆದಿದ್ದರು. ಇದನ್ನೂ ಓದಿ:3 ವರ್ಷಗಳ ನಂತರ ಸ್ವೀಟಿ ಅನುಷ್ಕಾ ಶೆಟ್ಟಿ ಕಮ್‌ಬ್ಯಾಕ್
View this post on Instagram
ಇದೀಗ ರಾಣಿಯ (Queen) ಪಾತ್ರಕ್ಕಾಗಿ ಉಟ್ಟಿದ್ದ ಸೀರೆ ಬಗ್ಗೆ ಪ್ರಗತಿ ಶೆಟ್ಟಿ ಸೀಕ್ರೆಟ್‌ವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ರಾಣಿಯ ಪಾತ್ರಕ್ಕಾಗಿ ಅಮ್ಮನ (Mother) ಸೀರೆಯನ್ನ (Saree) ಉಟ್ಟಿರೋದಾಗಿ ಪ್ರಗತಿ ತಿಳಿಸಿದ್ದಾರೆ. ನಮ್ಮ ಅಮ್ಮನ ಮದುವೆಯ ಸೀರೆಯನ್ನು ಮುವ್ವತ್ತೆರೆಡು ವರ್ಷದ ನಂತರ ‘ಕಾಂತಾರ’ ಸಿನಿಮಾದಲ್ಲಿ ಉಟ್ಟಿದ್ದು ತುಂಬಾ ಸಂತಸ ತಂದಿತ್ತು ಎಂದು ತಿಳಿಸಿದ್ದಾರೆ.
View this post on Instagram
‘ಕಾಂತಾರ’ (Kantara) ಚಿತ್ರದಲ್ಲಿ ಪ್ರಗತಿ ಶೆಟ್ಟಿ ಅವರು ರಾಣಿ ಪಾತ್ರದಲ್ಲಿಷ್ಟೇ ನಟಿಸಿರಲಿಲ್ಲ. ಎಲ್ಲಾ ಪಾತ್ರಗಳಿಗೂ ಕಾಸ್ಟ್ಯೂಮ್ ಡಿಸೈನ್ ಮಾಡಿ ಸೈ ಎನಿಸಿಕೊಂಡಿದ್ದರು. ‘ಕಾಂತಾರ’ ಚಿತ್ರದಲ್ಲಿ ಪತಿಯ ಕೆಲಸಕ್ಕೆ ಪ್ರಗತಿ ಸಾಥ್ ನೀಡಿದ್ದರು. ‘ಕಾಂತಾರ’ ಪಾರ್ಟ್ 2ನಲ್ಲೂ (Kantara 2) ರಿಷಬ್ ಶೆಟ್ಟಿ ಕೆಲಸಗಳಿಗೆ ಸಾಥ್ ನೀಡಲಿದ್ದಾರೆ.