ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ (Kantara) ಸಿನಿಮಾದ ಸೂಪರ್ ಸಕ್ಸಸ್ ನಂತರ ಕಾಂತಾರ ಪಾರ್ಟ್ 2 ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕುಟುಂಬದ (Family) ಜೊತೆ ಹೊಸ ಫೋಟೋಶೂಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಾ ರಾ ರಕ್ಕಮ್ಮ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಕೊಡಲಿದ್ದಾನಂತೆ ವಂಚಕ ಸುಕೇಶ್
ನಟ, ನಿರ್ದೇಶಕನಾಗಿ ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಕಾಂತಾರ 2, ಬೆಲ್‌ಬಾಟಂ 2 ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿದೆ. ಸಿನಿಮಾ ಕೆಲಸದಲ್ಲಿ ಅದೆಷ್ಟೇ ಬ್ಯುಸಿಯಿದ್ರು ಕುಟುಂಬಕ್ಕೂ ಕೊಂಚ ಸಮಯವನ್ನ ನಟ ಮೀಸಲಿಡುತ್ತಾರೆ.
Family ???? #familytime #pragathishetty #RanvitShetty #RaadyaShetty pic.twitter.com/cotNq5PuTP
— Rishab Shetty (@shetty_rishab) May 7, 2023
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಜೊತೆಗಿನ ಹೊಸ ಫೋಟೋಶೂಟ್ ಹಂಚಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ ಮಗ ರಣ್ವೀತ್ ಹುಟ್ಟುಹಬ್ಬದಂದು ತೆಗೆದ ಫೋಟೋವನ್ನ ಇದೀಗ ರಿಷಬ್ ಶೇರ್ ಮಾಡಿದ್ದಾರೆ. ಹಸಿರು ಪರಿಸರದಲ್ಲಿ ರಿಷಬ್ ಫ್ಯಾಮಿಲಿ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಇಬ್ಬರು ಮುದ್ದಾದ ಮಕ್ಕಳು, ಪತ್ನಿ ಪ್ರಗತಿ ಜೊತೆ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಅಭಿಮಾನಿಗಳ ಮನಗೆದ್ದಿದೆ.
ಕಾಂತಾರ 2ಗೆ ಕಥೆ ಸಿದ್ಧವಾಗಿದೆ. ಶೂಟಿಂಗ್ ತಯಾರಿ ಕೂಡ ನಡೆಯುತ್ತಿದೆ. ದೈವದ ಕಥೆ ಕುರಿತ ಫಸ್ಟ್ ಪಾರ್ಟ್ ನೋಡಿ ಖುಷಿಪಟ್ಟ ಫ್ಯಾನ್ಸ್, ‘ಕಾಂತಾರ 2’ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.