`ಕಾಂತಾರ’ (Kantara Film) ಹೀರೋ ರಿಷಬ್ ಶೆಟ್ಟಿ (Rishab Shetty) ದುಬೈಗೆ (Dubai) ಹಾರಿದ್ದಾರೆ. ಸಿನಿಮಾಗೆ ಬ್ರೇಕ್ ಕೊಟ್ಟು ಪತ್ನಿ ಪ್ರಗತಿ ಮತ್ತು ಮಕ್ಕಳೊಂದಿಗೆ ಅರಬ್ ದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
`ಕಾಂತಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ಈಗ ದುಬೈನಲ್ಲಿ ಫ್ಯಾಮಿಲಿ (Family) ಜೊತೆ ರಿಷಬ್ ಶೆಟ್ಟಿ ಟ್ರಿಪ್ ಹೋಗಿದ್ದಾರೆ. ಸಿನಿಮಾ ಪ್ರಚಾರ, ಶೂಟಿಂಗ್ ಅಂತಾ ವರ್ಷಾನುಗಟ್ಟಲೇಯಿಂದ ಬ್ಯುಸಿಯಿದ್ದ ರಿಷಬ್ ಶೆಟ್ಟಿ ಈಗ ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ನೀಡಿ ಕುಟುಂಬದ ಜೊತೆ ಅಡ್ವೆಂಚರ್ ಆಗಿ ಕಾಲ ಕಳೆಯುತ್ತಿದ್ದಾರೆ.
View this post on Instagram
ಅರಬ್ ದೇಶದಲ್ಲಿ ಪತ್ನಿ ಪ್ರಗತಿ ಮತ್ತು ಇಬ್ಬರು ಮುದ್ದು ಮಕ್ಕಳೊಂದಿಗೆ ಬೀಡು ಬಿಟ್ಟಿದ್ದಾರೆ. ಡೆಸರ್ಟ್ ರೈಡಿಂಗ್, ಪ್ಯಾರಾ ಗ್ಲೈಡಿಂಗ್, ಸೇರಿದಂತೆ ಅಡ್ವೆಂಚರ್ ಆಟಗಳನ್ನ ಆಡಿದ್ದಾರೆ. ಕುಟುಂಬದೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದಾರೆ. ಈ ಕುರಿತ ವೀಡಿಯೋವನ್ನ ರಿಷಬ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ
ಇನ್ನೂ ಈ ವೀಡಿಯೋ ಶೇರ್ ಆಗುತ್ತಿದ್ದಂತೆ `ಕಾಂತಾರ 2′ ಚಿತ್ರದ ಬಗ್ಗೆ ಫ್ಯಾನ್ಸ್ ಅಪ್ಡೇಟ್ ಕೇಳಿದ್ದಾರೆ. ಕಾಂತಾರ ಪಾರ್ಟ್ 2 ಯಾವಾಗ ಎಂದು ಪ್ರಶ್ನೆಗಳನ್ನ ರಿಷಬ್ ಮುಂದಿಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k