ಮಂಗಳೂರು: ನಟ ಚೇತನ್ ತಮ್ಮನ್ನು ತಾವು ಬೆಳಕಿಗೆ ತರಲು ಕಾಂತಾರ (Kantara) ಸಿನಿಮಾವನ್ನು ಬಳಸಿದ್ದಾರೆ ಎಂದು ಕಾಂತಾರ ಚಿತ್ರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಕಿಡಿಕಾರಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿ, ದೈವಾರಾಧನೆಯ ವಿರುದ್ಧ ಮಾತನಾಡಿದ ನಟ ಚೇತನ್ (Chetan) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಂತಾರದ ಹೆಸರಿನಲ್ಲಿ ತಾನು ಪ್ರಚಾರ ಪಡೆದುಕೊಳ್ಳಬೇಕೆಂದು ಅವರ ಪ್ಲಾನ್ ಆಗಿದೆ ಎಂದರು.
ದೈವಾರಾಧನೆ ಇವತ್ತು ನಿನ್ನೆಯದಲ್ಲ, ಕಾಂತಾರ ನೋಡಿದ ನಂತರವೇ ಅವರಿಗೆ ಗೊತ್ತಾಗಿದೆ. ಈಗ ಅವರು ನಮ್ಮ ಚಿತ್ರಕ್ಕೆ ಪ್ರಚಾರದ ಕೆಲಸ ಮಾಡ್ತಿದ್ದಾರೆ. ಆದರೆ ಇವರ ಪಬ್ಲಿಸಿಟಿ ನಮಗೆ ಬೇಕಾಗಿಲ್ಲ. ಆದರೂ ಅವರಿಗೊಂದು ದೊಡ್ಡ ಧನ್ಯವಾದ ಎಂದರು. ಇದನ್ನೂ ಓದಿ: `ಕಾಂತಾರ’ದಂತೆ ನನ್ನ ಸಿನಿಮಾ ಹಿಟ್ ಆಗಲ್ಲ ಅಂತ ಚೇತನ್‌ಗೆ ಹೊಟ್ಟೆಕಿಚ್ಚು – ಸೂಲಿಬೆಲೆ
ಭೂತಾರಾಧನೆ, ದೈವಾರಾಧನೆ ಓದಿ ಆಮೇಲೆ ಮಾತನಾಡಲಿ ಎಂದ ಅವರು, ದೈವಕ್ಕೆ ಅವಮಾನ ಮಾಡಿದ್ರೆ, ಅದಕ್ಕೆ ತಕ್ಕ ಶಿಕ್ಷೆ ಆಗುತ್ತದೆ. ಅವರು ದೈವದ ಬಗ್ಗೆ ತಿಳಿಯಬೇಕಿದ್ರೆ ತುಳುನಾಡಿಗೆ ಬನ್ನಿ, ಅಲ್ಲಿ ತಪ್ಪು ಮಾಡಿರುವ ಬಗ್ಗೆ ಕ್ಷಮೆ ಕೇಳಿದ್ರೆ ಅವರಿಗೆ ಒಳ್ಳೆ ಬುದ್ಧಿ ದೈವಗಳು ಕೊಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್