ಹುಬ್ಬಳ್ಳಿ: ಕಾಂತಾರ (Kantara) ರೀತಿಯಲ್ಲಿ ತನ್ನ ಸಿನಿಮಾ (Cinema) ಹಿಟ್ ಆಗಲ್ಲ ಅಂತಾ ನಟ ಚೇತನ್‌ಗೆ (Chetan Ahimsa) ಹೊಟ್ಟೆ ಕಿಚ್ಚು ಇರಬಹುದು. ಹಾಗಾಗಿ ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ತಿರುಗೇಟು ನೀಡಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ (PubliTV) ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, `ಕಾಂತಾರ’ ಸಿನಿಮಾ ಕುರಿತಂತೆ ನಟ ಚೇತನ್ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಒಬ್ಬ ನಟನೂ ಅಲ್ಲ ಎಡಪಂಥೀಯ ವ್ಯಕ್ತಿಯೂ ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್
ನಟ ಚೇತನ ಅಂತೋರು ಬುಡಕಟ್ಟು ಜನಾಂಗದವರನ್ನು ಹಿಂದೂ ಧರ್ಮದಿಂದ ಬೇರೆ ಮಾಡುವ ಹುನ್ನಾರ ನಡೆಸಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ ಆದಿವಾಸಿ ಜನಾಂಗ, ದಲಿತ, ಹೀಗೆ ಎಲ್ಲರನ್ನೂ ಸೇರಿ ಹಿಂದೂ ಧರ್ಮವಾಗಿದೆ. ಆಕಾಶಕ್ಕೆ ಮುಖ ಮಾಡಿ ಉಗಳುವ ಕೆಲಸ ಮಾಡ್ತಿದ್ದಾರೆ. ಆದರೆ ಅದೇ ಅವರ ಮುಖಕ್ಕೆ ಬೀಳುತ್ತದೆ. ಈ ಹಿಂದೆ, ಹಿಂದಿಯಲ್ಲಿ ಹಿಂದೂ ಧರ್ಮದ ಅವಹೇಳನ ಮಾಡಿ ಸಿನಿಮಾ ಮಾಡಲಾಗುತ್ತಿತ್ತು. ಆಗ ಚೇತನ್‌ನಂತವರು ಸುಮ್ಮನಿದ್ದರು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ನೀಡಿದ ಆದೇಶದಿಂದ ದೊಡ್ಮನೆ ಶೇಕ್
ಹಿಂದೂ ಧರ್ಮ (Hindu Religion) ಅವಹೇಳನವೇ ಅವರಿಗೆ ಬೇಕಿತ್ತು. ಆದರೆ ಇತ್ತೀಚೆಗೆ ಹಿಂದೂ ಧರ್ಮದ ಪರಂಪರೆ, ಆಚರಣೆ, ಸನಾತನ ಧರ್ಮ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾಗಳು ಬರುತ್ತಿದ್ದು, ಇದು ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ