ಕನ್ನಡದ `ಕಾಂತಾರ'(Kantara Film) ಪ್ಯಾನ್ ಇಂಡಿಯಾ ಸಿನಿಮಾವಾಗಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ವಿಶ್ವ ಮಟ್ಟದಲ್ಲಿ `ಕಾಂತಾರ’ ಸಿನಿಮಾ ಇದೀಗ ಒಟ್ಟು 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ರಿಷಬ್(Rishab Shetty) ಸಿನಿಮಾಗೆ ಬ್ರೇಕ್ ಇಲ್ಲದೇ ಓಡುತ್ತಿದೆ.
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಕಾಂತಾರ(Kantara Film) ಗಡಿ ಮೀರಿ ಅದ್ಬುತ ಪ್ರದರ್ಶನ ಕಾಣುತ್ತಿದೆ. ಸೆ.30ರಂದು ಕಾಂತಾರ ಸಿನಿಮಾ ರಿಲೀಸ್ ಆಗಿತ್ತು. ಚಿತ್ರ ರಿಲೀಸ್ ಆಗಿ, ಹಲವು ವಾರಗಳು ಕಳೆದರೂ ಚಿತ್ರದ ಓಟ ನಿಲ್ಲುತ್ತಿಲ್ಲ. ದೈವದ ಶಕ್ತಿಯನ್ನ ತೆರೆಯ ಮೇಲೆ ತೋರಿಸಿ, ನಟಿಸಿ ರಿಷಬ್ ಶೆಟ್ಟಿ ಗೆದ್ದು ಬೀಗಿದ್ದಾರೆ. ಈಗ ಈ ಚಿತ್ರ ವಿಶ್ವ ಮಟ್ಟದಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಕಂಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ:ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ
ಹಿಂದಿಯಲ್ಲಿ ಕಾಂತಾರ 50 ಕೋಟಿ ರೂ, ಕನ್ನಡದಲ್ಲಿ ನೂರಾರು ಕೋಟಿ, ಜೊತೆಗೆ ತೆಲುಗು ತಮಿಳುನಲ್ಲಿಯೂ ಕಲೆಕ್ಷನ್ ವಿಷ್ಯದಲ್ಲಿ ಚಿತ್ರ ಮುಂದಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ಒಟ್ಟು 300 ಕೋಟಿ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿದೆ.
ಇನ್ನೂ `ಕಾಂತಾರ’ ಮಾಡಿ, ಗೆದ್ದಿರುವ ರಿಷಬ್ ಶೆಟ್ಟಿಯ ಮುಂದಿನ ಸಿನಿಮಾ ಬಗ್ಗೆ ಫ್ಯಾನ್ಸ್ ಕಾಯ್ತಿದ್ದಾರೆ. ಕಾಂತಾರ 2ಗಾಗಿ ಅಭಿಮಾನಿಗಳು ಡಿಮ್ಯಾಂಡ್ ಮಾಡ್ತಿದ್ದಾರೆ. ರಿಷಬ್ ಶೆಟ್ಟಿ ಕಾಂತಾರ ಪಾರ್ಟ್ ಬಗ್ಗೆ ಸೂಚನೆ ಕೊಟ್ಟಿದ್ದಾರೆ.