ವಿವಾದಾತ್ಮಕ (Controversy) ಹೇಳಿಕೆಯ ವಿಚಾರವಾಗಿ ನಟ ಚೇತನ್ (Chetan) ಮೇಲೆ ಮತ್ತೊಂದು ದೂರು ದಾಖಲಾಗಿದೆ. ಭೂತಾರಾಧನೆಯ ಕುರಿತಾಗಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ, ಅದು ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಮಾತನಾಡಿದ್ದಾರೆ. ಈ ಕುರಿತಂತೆ ಭಜರಂಗದ ದಳದ ಕಾರ್ಯಕರ್ತ ಮಂಜುನಾಥ್ ಎನ್ನುವವರು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ (Police) ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ.
Advertisement
ನಟ ಚೇತನ್ ಹಿಂದೂ ದೇವರ ಹಾಗೂ ಸಂಸ್ಕೃತಿಯ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ದಾಖಲಿಸಿದ್ದಾರೆ. ಈ ಹಿಂದೆಯೂ ಚೇತನ್ ವಿರುದ್ಧ ಪಂಜುರ್ಲಿ ದೈವಕ್ಕೆ ದೂರು ನೀಡಲು ನಿರ್ಧರಿಸಲಾಗಿತ್ತು. ಈ ಸಂಬಂಧವಾಗಿ ಉಡುಪಿಯಲ್ಲಿ ಹಿರಿಯ ದೈವರಾಧಕ ಕುಮಾರ ಪಂಪದ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ:ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್
Advertisement
Advertisement
ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಕಾಂತಾರ (Kantara) ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಈ ಹೇಳಿಕೆ ಮಹತ್ವ ಪಡೆದುಕೊಂಡಿತ್ತು. ಈ ಮಾತಿಗೆ ವಿರೋಧ ಎನ್ನುವಂತೆ ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ನೀಡಿದ್ದರು. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ವಿರೋಧಿಸಿದ್ದರು. ಈ ಕುರಿತು ಪರ ವಿರೋಧ ಚರ್ಚೆ ಕೂಡ ನಡೆದಿತ್ತು. ಇದಕ್ಕೆ ಚೇತನ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ರಿಷಬ್ ಬಳಸಿದ ‘ಹಿಂದೂ ಸಂಸ್ಕೃತಿ’ ಪದಕ್ಕೆ ನನ್ನ ಆಕ್ಷೇಪಣೆ ಇದೆ ಎಂದಿದ್ದಾರೆ.
Advertisement
ಚೇತನ್ ಆಡಿದ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗುತ್ತಿದ್ದಂತೆಯೇ ಅದಕ್ಕೆ ಸ್ಪಷ್ಟನೆ ಎನ್ನುವಂತೆ ಇಂದು ಮಾಧ್ಯಮ ಗೋಷ್ಠಿ ಕರೆದಿದ್ದರು ನಟ. ಅಲ್ಲಿಯೂ ತಾವಾಡಿದ ಮಾತಿಗೆ ಬದ್ಧರಾಗಿಯೇ ಮಾತನಾಡಿದರು. ಬುಡಕಟ್ಟು ನಮ್ಮ ಮೂಲ ಸಂಸ್ಕೃತಿ. ಇವರಿಗೆ 70 ಸಾವಿರ ವರ್ಷಕ್ಕೂ ಅಧಿಕ ಇತಿಹಾಸವಿದೆ. ಹಿಂದೂ ಧರ್ಮಕ್ಕೆ ಕೇವಲ ಮೂರುವರೆ ಸಾವಿರ ವರ್ಷ ಇತಿಹಾಸ. ದೈವಾರಾಧನೆ, ಭೂತಕೋಲ ಇವುಗಳು ಬುಡಕಟ್ಟು ಸಂಸ್ಕೃತಿಗಳು. ಅದು ಹೇಗೆ ಹಿಂದೂ ಸಂಸ್ಕೃತಿ ಆಗುತ್ತವೆ? ಎಂದು ನಿರೂಪಿಸಿದರು.