ಕಾಂತಾರ ಶೂಟಿಂಗ್‌ – ಯಾವುದೇ ಅವಘಡ ಸಂಭವಿಸಿಲ್ಲ: ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Public TV
1 Min Read
Kantara Chapter 1 shooting No mishap occurred Hombale Films clarifies

ಶಿವಮೊಗ್ಗ: ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾ ಶೂಟಿಂಗ್‌ ನಡೆಸಲು ಶಿಪ್‌ ಸೆಟ್‌ ನಿರ್ಮಾಣ ಮಾಡಿದ್ದೆವು. ಗಾಳಿ ಮಳೆಯಿಂದ ಸೆಟ್‌ ಮುಗುಚಿ ಹೋಗಿದೆ ಹೊರತು ಕಲಾವಿದರಿಗೆ ಏನೂ ಆಗಿಲ್ಲ ಎಂದು ಹೊಂಬಾಳೆ ಫಿಲ್ಮ್ಸ್‌ (Hombale Films) ತಿಳಿಸಿದೆ.

ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್‌ ಅವರು ಪ್ರತಿಕ್ರಿಯಿಸಿ, ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಶೂಟಿಂಗ್‌ ಸಮಯದಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ʻಕಾಂತಾರ ಚಾಪ್ಟರ್-1ʼ ಶೂಟಿಂಗ್‌ ವೇಳೆ ಮತ್ತೊಂದು ಅವಘಡ – ರಿಷಬ್‌ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

 

ಸೆಟ್ ಹಾಕಿದ ಸ್ಥಳದಿಂದ ನಾವು ತುಂಬಾ ದೂರದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ನಮ್ಮ ತಂಡದಲ್ಲಿ ಯಾರಿಗೂ-ಯಾವುದೇ ಅನಾಹುತವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದು ಭಾನುವಾರವೂ ಸಹ ಚಿತ್ರೀಕರಣ ನಡೆದಿದೆ. ಜಲಾಶಯ ಪಕ್ಕದಲ್ಲಿ ಯಾವುದೇ ಚಿತ್ರಿಕರಣ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ದೈವಕ್ಕೆ ಅಪಚಾರ ಮಾಡಿದ ಕಡೆಯೆಲ್ಲ ದುರಂತಗಳಾಗಿವೆ: ಸಂಶೋಧಕಿ ಡಾ. ಲಕ್ಷ್ಮಿ ಪ್ರಸಾದ್

ಪೊಲೀಸ್‌ ಇಲಾಖೆ, ಪಂಚಾಯತ್‌, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಶೂಟಿಂಗ್‌ ನಡೆಸಲು ಅನುಮತಿ ಪಡೆಯಲಾಗಿದೆ ಎಂದು ಹೇಳಿದರು.

Share This Article