ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಿಸಿದ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ಅ.2 ರಂದು ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ವಿಶ್ವದಾದ್ಯಂತ ತೆರೆಕಂಡ ಕಾಂತಾರ ಸಿನಿಮಾ ಓಟಿಟಿಗೆ ಬಂದಿದೆ. ಆದರೂ, ಕೂಡಾ ಸಿನಿಮಾ ಮೇಲಿನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಈಗಲೂ ಥಿಯೇಟರ್‌ಗೆ ಬಂದು ಸಿನಿಮಾವನ್ನ ನೋಡುತ್ತಿದ್ದಾರೆ ಪ್ರೇಕ್ಷಕರು.
ಅಂದಹಾಗೆ ಕಾಂತಾರ ಚಾಪ್ಟರ್-1 ಚಿತ್ರ ಐದು ವಾರಗಳನ್ನ ಪೂರೈಸಿ ಆರನೇ ವಾರಕ್ಕೆ ಕಾಲಿಟ್ಟಿದೆ. ಹಿಂದಿ ವರ್ಷನ್ ಸಿನಿಮಾ ಇನ್ನೂ ಓಟಿಟಿಗೆ ಬಂದಿಲ್ಲ. ಹೀಗಾಗಿ, ಉತ್ತರ ಭಾರತದಲ್ಲಿ ಸಿನಿಮಾ ಕಲೆಕ್ಷನ್ ತಗ್ಗಿಲ್ಲ. ಇತ್ತೀಚೆಗೆ ಸೆಲೆಬ್ರಿಟಿಗಳು ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್, ವಿಕ್ಕಿ ಕೌಶಾಲ್ ಮನೆಗೆ ಬಂದ ಹೊಸ ಅತಿಥಿ
ಕಾಂತಾರ 5 ವಾರಗಳನ್ನ ಕಂಪ್ಲೀಟ್ ಮಾಡಿದ್ದು, ವಿಶ್ವದಾದ್ಯಂತ 883 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆಯಂತೆ. ಈ ಬಗ್ಗೆ ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಮಾಹಿತಿಯನ್ನ ಹಂಚಿಕೊಂಡಿದೆ. ಇನ್ನು ಭಾರತದಾದ್ಯಂತ ಸುಮಾರು 615 ಕೋಟಿ ಮೊತ್ತವನ್ನ ಕಲೆ ಹಾಕಿದೆಯಂತೆ ಕಾಂತಾರ ಚಾಪ್ಟರ್-1 ಸಿನಿಮಾ. ಅಂದಹಾಗೆ ಕಾಂತಾರ ಚಾಪ್ಟರ್-1 ಸಾವಿರ ಕೋಟಿಯನ್ನ ತಲುಪುವ ನಿರೀಕ್ಷೆ ಇಟ್ಟುಕೊಂಡಿತ್ತು. ಆ ನಿಟ್ಟಿನಲ್ಲಿ ಈಗ 883 ಕೋಟಿಯನ್ನ ಬಾಚಿಕೊಂಡಿದೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ.

