ಸ್ಯಾಂಡಲ್‌ವುಡ್‌ನ ಹೆಮ್ಮೆ `ಕಾಂತಾರ’ (Kantara Film) ಸಿನಿಮಾಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಇನ್ನೊಂದು ಹಿರಿಮೆಗೆ ಪಾತ್ರವಾಗಿದೆ. ಮುಂಬೈನ ಪ್ರಸಿದ್ಧ ಥಿಯೇಟರ್‌ನಲ್ಲಿ ಹಿಂದೆ ಡಬ್ ಆಗದೇ ಮೂಲ ಭಾಷೆಯಲ್ಲಿ ರಿಲೀಸ್ ಆಗಿರುವ ಮೊದಲ ಸೌತ್ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿರುವ `ಕಾಂತಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇನ್ನೂ ತೆಲುಗಿನಲ್ಲಿ ಅ.15ರಂದು ಮತ್ತು ಹಿಂದಿಯಲ್ಲಿ ಇದೇ ಅ.14ರಂದು ತೆರೆಗೆ ಬರಲಿದೆ. ಪರರಾಜ್ಯದಲ್ಲಿ ಕನ್ನಡ ಸಿನಿಮಾಗೆ ನೋಡೋಕೆ ಹಿಂದೆ ಮುಂದೆ ನೋಡುವ ಜನ, ಇದೀಗ `ಕಾಂತಾರ’ ಚಿತ್ರವನ್ನ ನೋಡಲು ಮುಗಿಬಿದ್ದು ನೋಡ್ತಿದ್ದಾರೆ. ಈ ಮಧ್ಯೆ ಮುಂಬೈನ ಪ್ರಸಿದ್ಧ ಥಿಯೇಟರ್‌ನಲ್ಲಿ ಹಿಂದೆ ಡಬ್ ಆಗದೇ ಮೂಲ ಭಾಷೆಯಲ್ಲಿ ರಿಲೀಸ್ ಆಗಿರುವ ಮೊದಲ ಚಿತ್ರವಾಗಿದೆ.
ಪ್ರದರ್ಶಕರು ಆರಂಭದಲ್ಲಿ ಹಿಂದಿಯೇತರ ಚಲನಚಿತ್ರವನ್ನು ಬಿಡುಗಡೆ ಮಾಡಲು ಹಿಂಜರಿದರು, ನಂತರ ಸಿನಿಮಾ ಕುರಿತ ಭರಪೂರ ವಿಮರ್ಶೆ ಅವರ ಇಷ್ಟು ವರ್ಷಗಳ ಸಂಪ್ರದಾಯವನ್ನೇ ಮುರಿಯುವಂತೆ ಮಾಡಿದೆ. ಮೂಲ ಭಾಷೆಯಲ್ಲಿ ಮುಂಬೈನ ಐಕಾನಿಕ್ ಮರಾಠ ಮಂದಿರದಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕಾಂತಾರ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ
View this post on Instagram
ರಿಷಬ್ ಮತ್ತು ಸಪ್ತಮಿ ಗೌಡ(Saptami Gowda) ನಟನೆಯ `ಕಾಂತಾರ’ ಮುಂಬೈನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಸಿನಿಮಾ ಲೂಟಿ ಮಾಡುತ್ತಿದೆ.