ಲಕ್ನೋ: ಎರಡರ ಮಗ್ಗಿಯನ್ನು ತಪ್ಪಾಗಿ ಹೇಳಿದ ವಿದ್ಯಾರ್ಥಿ ಕೈಯನ್ನು ಡ್ರಿಲ್ ಮಷಿನ್ (Drill Machine) ಮೂಲಕ ಶಿಕ್ಷಕ ಗಾಯಗೊಳಿಸಿರುವ ಘಟನೆ ಕಾನ್ಪುರದಲ್ಲಿ (Kanpur) ನಡೆದಿದೆ.
ಈ ಘಟನೆ ಕಾನ್ಪುರದ ಮಾಡೆಲ್ ಪ್ರೇಮ್ ನಗರದ (Model Prem Nagar) ಅಪ್ಪರ್ ಪ್ರೈಮರಿ ಸ್ಕೂಲ್(Upper Primary School)ನಲ್ಲಿ ನಡೆದಿದೆ. ಕೌಶಲ್ಯ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಶಾಲೆಗಳಲ್ಲಿ ತರಬೇತಿ ಪಾಠಗಳನ್ನು ನೀಡುವ ಐಬಿಟಿ ಸಂಸ್ಥೆಗೆ ಸಂಯೋಜಿತವಾಗಿರುವ ಶಿಕ್ಷಕರೊಬ್ಬರು 5ನೇ ತರಗತಿಯ ವಿದ್ಯಾರ್ಥಿ ಎರಡರ ಮಗ್ಗಿಯನ್ನು ಹೇಳಲಿಲ್ಲ ಎಂಬ ಕಾರಣಕ್ಕೆ ಡ್ರಿಲ್ ಮಷಿನ್ ಮೂಲಕ ಆತನ ಕೈಯನ್ನು ಗಾಯಗೊಳಿಸಿದ್ದಾರೆ.
Advertisement
Advertisement
5 ನೇ ತರಗತಿಯ ವಿದ್ಯಾರ್ಥಿ ವಿವಾನ್ ಗಾಯಗೊಂಡ ವಿದ್ಯಾರ್ಥಿಯಾಗಿದ್ದು, ನಡೆದ ಘಟನೆಯನ್ನು ತನ್ನ ಪೋಷಕರ ಬಳಿ ತಿಳಿಸಿದಾಗ, ಶಾಲೆಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಆರೋಪಿ ಶಿಕ್ಷಕನನ್ನು ಅನುಜ್ ಎಂದು ಗುರುತಿಸಲಾಗಿದ್ದು, ತರಗತಿಗೆ ಡ್ರಿಲ್ ಮಷಿನ್ ತೆಗೆದುಕೊಂಡು ಬಂದಿದ್ದನು. ನಂತರ ಎರಡರ ಮಗ್ಗಿಯನ್ನು ಹೇಳಲಿಲ್ಲ ಎಂದು ಡ್ರಿಲ್ ಮಷಿನ್ ಆನ್ ಮಾಡಿ ವಿದ್ಯಾರ್ಥಿಯ ಕೈಗೆ ಸ್ಪರ್ಶಿಸಿದ್ದಾನೆ. ಇದೇ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಕೃಷ್ಣ ಎಂಬ ವಿದ್ಯಾರ್ಥಿ ಡ್ರಿಲ್ ಮಷಿನ್‍ನ ಪ್ಲಗ್ ತೆಗೆದಿದ್ದಾನೆ. ಆದರೂ ವಿವಾನ್ ಎಡಗೈಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ.
Advertisement
ತಕ್ಷಣವೇ ಬಾಲಕನಿಗೆ ಸಣ್ಣಪುಟ್ಟ ಚಿಕಿತ್ಸೆ ನೀಡಿ ಶಾಲೆಯಿಂದ ಕಳುಹಿಸಲಾಗಿದೆ. ಅಲ್ಲದೇ ಶಿಕ್ಷಕಿ ಅಲ್ಕಾ ತ್ರಿಪಾಠಿ ಈ ವಿಚಾರವನ್ನು ಯಾವುದೇ ಉನ್ನತ ಅಧಿಕಾರಿಗಳಿಗೆ ತಿಳಿಸಿರಲಿಲ್ಲ. ಆದರೆ ಶುಕ್ರವಾರ ಈ ಘಟನೆ ಬಗ್ಗೆ ಪೋಷಕರು ಗಲಾಟೆ ಮಾಡಿದ ಬಳಿಕ ಮೇಲಾಧಿಕಾರಿಗಳಿಗೆ ವಿಚಾರ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಫೋನ್ ಕಾಲ್ ಹಿಂದೆ ಬಿದ್ದ ಕೇಂದ್ರ ಚುನಾವಣಾ ಆಯೋಗ
Advertisement
ವಿಷಯ ತಿಳಿಯುತ್ತಿದ್ದಂತೆಯೇ ಬಿಎಸ್‍ಎ ಸುರ್ಜಿತ್ ಕುಮಾರ್ ಸಿಂಗ್ ಸ್ಥಳಕ್ಕೆ ಆಗಮಿಸಿ, ವಿಚಾರಣೆ ನಡೆಸಿ ಶಿಕ್ಷಕನನ್ನು ಶಾಲೆಯಿಂದ ತೆಗೆದುಹಾಕಲಾಗುತ್ತಿದೆ. ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತೆ ಕರ್ನಾಟಕದ ಬಸ್‍ಗೆ ಕಲ್ಲು ತೂರಾಟ – ಮಿರಜ್ ಮಾರ್ಗವಾಗಿ ಸಂಚರಿಸುವ ಬಸ್‍ಗಳ ಸಂಚಾರ ಸ್ಥಗಿತ