ನವದೆಹಲಿ: ಕಾನ್ಪುರ ವಿದ್ಯುತ್ ಸರಬರಾಜು ಕಂಪನಿ (ಕೆಸ್ಕೋ) ವಿದ್ಯುತ್ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಕುರ್ಚಿ ಮೇಲೆ ಕುಳಿತು ಆರಾಮವಾಗಿ ಬಿಯರ್ ಕುಡಿದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಕೆಸ್ಕೋ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಧಿಂಗ್ರಾ ಅವರು ಸಹಾಯಕ ಎಂಜಿನಿಯರ್‌ನನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ ಮತ್ತು ಈ ಕುರಿತಂತೆ ತನಿಖೆ ನಡೆಸಲು ವಿಶೇಷ ತಂಡವನ್ನು ಆಯೋಜಿಸಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆ – ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಕಾಂಗ್ರೆಸ್-ಬಿಜೆಪಿಯಲ್ಲಿ ಇನ್ನೂ ಅಂತಿಮವಾಗದ ಅಭ್ಯರ್ಥಿಗಳು
Advertisement
ಸಹಾಯಕ ಇಂಜಿನಿಯರ್‍ನನ್ನು ತುಷಾರ್ ಕಾಂತ್ ಎಂದು ಗುರುತಿಸಲಾಗಿದ್ದು, ವೀಡಿಯೋದಲ್ಲಿ ಕಚೇರಿಯೊಳಗೆ ಯಾರ ಭಯವು ಇಲ್ಲದೇ ಆರಾಮವಾಗಿ ಕುರ್ಚಿ ಮೇಲೆ ಕುಳಿತು ಬಿಯರ್ ಕುಡಿಯುತ್ತಿರುವುದನ್ನು ಕಾಣಬಹುದಾಗಿದೆ. ವಿದ್ಯುತ್ ಕಂಪನಿಯ ಉದ್ಯೋಗಿಗಳು ಕಚೇರಿಯೊಳಗೆ ಕುಳಿತು ಮದ್ಯ ಸೇವಿಸುತ್ತಿರುವುದು ಇದೇ ಮೊದಲೆನಲ್ಲ. ಅನೇಕ ಉದ್ಯೋಗಿಗಳು ಇದೇ ರೀತಿ ಕಚೇರಿಯೊಳಗೆ ಅನೇಕ ಬಾರಿ ಮದ್ಯ ಸೇವಿಸಿರುವ ಹಲವಾರು ಘಟನೆಗಳಿದೆ. ಇದನ್ನೂ ಓದಿ: ಸದ್ಗುರು ಜೊತೆ ಮಂಡಿ ನೋವಿನ ಬಗ್ಗೆ ಹೇಳಿಕೊಂಡ ಸಿಎಂ
Advertisement
ಕಳೆದ ವರ್ಷ ಗೋವಿಂದ್ ನಗರದಲ್ಲಿರುವ ದಕ್ಷಿಣಾಚಲ ವಿದ್ಯುತ್ ವಿತ್ರನ್ ಬ್ಲಾಕ್‍ನ ಮುಖ್ಯ ಕಚೇರಿಯ ಪರೀಕ್ಷಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪ್ಯೂನ್ ರಜಿಯಾ ಖಾನ್ ಅವರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.