– ಆತ್ಮವಿಶ್ವಾಸ ತುಂಬಿದ ಕನ್ನಡ ಒಕ್ಕೂಟ
ದುಬೈ/ಬೆಂಗಳೂರು: ದುಬೈನಲ್ಲಿ (Dubai) ಸಿಲುಕಿರುವ ಕನ್ನಡಿಗರ (Kannadigas) ಸುರಕ್ಷತೆಗೆ ಆದ್ಯತೆ ನೀಡಿರುವ `ಕನ್ನಡಿಗಾಸ್ ಹೆಲ್ಪ್‌ಲೈನ್’ (Kannadigas Helpline) ತಂಡ ಪ್ರವಾಸಿಗರಲ್ಲಿ ಆತ್ಮವಿಶ್ವಾಸ ತುಂಬಿದೆ.
ಹೌದು, ಇರಾನ್-ಇಸ್ರೇಲ್ ಯುದ್ಧದಿಂದಾಗಿ (Iran-Israel Airstrike) ಉದ್ವಿಗ್ನತೆ ಹೆಚ್ಚಾಗಿದೆ. ಇದರಿಂದ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ದುಬೈನಲ್ಲಿ ಸಿಲುಕಿಕೊಂಡು ತವರಿಗೆ ಮರಳಲಾಗದೇ ಸಂಕಷ್ಟದಲ್ಲಿದ್ದಾರೆ. ಅಂಥವರ ನೆರವಿಗೆ ಅನಿವಾಸಿ ಕನ್ನಡಿಗ ಪೋಷಕರಾದ ರೊನಾಲ್ಡ್ ಕೊಲಸೊ ನೇತೃತ್ವದ `ಕನ್ನಡಿಗಾಸ್ ಹೆಲ್ಪ್‌ಲೈನ್’ ತಂಡ ಧಾವಿಸಿದೆ. ಇದನ್ನೂ ಓದಿ: ಏಲಿಯನ್ ಫೈಲ್ಸ್ ರಿಲೀಸ್‌ಗೆ ಟ್ರಂಪ್ ಆದೇಶ – ‘ಏರಿಯಾ 51’ರಲ್ಲಿ ಇವೆಯಾ ಅನ್ಯಗ್ರಹ ಜೀವಿಗಳ ಮೃತದೇಹಗಳು?

ಯುಎಇಯಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಕನ್ನಡಿಗಾಸ್ ಹೆಲ್ಪ್‌ಲೈನ್ ಸಹಾಯಹಸ್ತ ಚಾಚಿದ್ದು, ಕನ್ನಡಿಗರ ಮಾಹಿತಿ ಸಂಗ್ರಹಿಸಿ ತುರ್ತು ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರವಾಸಿಗರ ತುರ್ತು ವೆಚ್ಚ ಭರಿಸಲು ಸಹ ಸಿದ್ಧತೆ ನಡೆಸಿದೆ. ವೈದ್ಯಕೀಯ ಸೇವೆಗಾಗಿ ಸಹ ಕನ್ನಡಿಗಾಸ್ ಹೆಲ್ಪ್‌ಲೈನ್ ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದೆ. ದುಬೈ, ಶಾರ್ಜಾ, ಅಬುಧಾಬಿ, ಅಜ್ಮಾನ್ ಎಲ್ಲೇ ಇದ್ದರೂ ಕನ್ನಡಿಗಾಸ್ ಹೆಲ್ಪ್‌ಲೈನ್ ಸಂಪರ್ಕಿಸುವಂತೆ ತಿಳಿಸಿದೆ. ಇದನ್ನೂ ಓದಿ: ʻದೇವರನಾಡುʼ ಕೇರಳ ʻಕೇರಳಂʼ ಆಗಿದ್ದೇಕೆ? – ಇದು ಕೇವಲ ಹೆಸರಲ್ಲ ಐತಿಹಾಸಿಕ, ಸಾಂಸ್ಕೃತಿಕ ಪಯಣದ ಹಿಂದಿನ ಕಥೆ!
ರೊನಾಲ್ಡ್ ಕೊಲಸೊ ಅವರು ಮಾತನಾಡಿ, ಯುಎಇ ಅತ್ಯಂತ ಸುರಕ್ಷಿತ ದೇಶ, ಪರಿಸ್ಥಿತಿ ಶೀಘ್ರದಲ್ಲೇ ಮೊದಲಿನಂತೆ ಆಗುತ್ತದೆ. ಎಲ್ಲರೂ ಯುಎಇ ಸರ್ಕಾರದ ಮಾರ್ಗದರ್ಶನ ಪಾಲಿಸಿ ಸಹಕರಿಸಬೇಕು ಎಂದ ಅವರು, ಈಗ ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ ತುರ್ತು ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಇದಕ್ಕೆ ಬೇಕಾದ ವೆಚ್ಚವನ್ನು ಭರಿಸಲು ನಾನು ತಯಾರಿದ್ದೇನೆ. ಅದೇ ರೀತಿ ಕರ್ನಾಟಕ ಸರ್ಕಾರ ತುರ್ತು ಪರಿಹಾರ ಸಹಾಯಧನ ಘೋಷಣೆ ಮಾಡಲು ಒತ್ತಾಯಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: 4-5 ವಾರಗಳವರೆಗೆ ಮುಂದುವರಿಯುತ್ತೆ – ಅರಬ್ ರಾಷ್ಟ್ರಗಳು ನಮ್ಮ ಜೊತೆ ಸೇರಲು ಬಯಸುತ್ತಿವೆ: ಟ್ರಂಪ್

