Bengaluru CityKarnatakaLatestMain Post

ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರಿಗೆ ‘ಅಂತಾರಾಷ್ಟ್ರೀಯ ವಿಶ್ವ ಮಾನ್ಯ’ ಪ್ರಶಸ್ತಿಯ ಗೌರವ

ಅಬುಧಾಬಿ: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ದುಬೈನ ಶೇಕ್ ರಶೀದ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮ ಕನ್ನಡಿಗರು ದುಬೈ ಸಹಯೋಗದೊಂದಿಗೆ ನವೆಂಬರ್ 19ರಂದು ವಿಜ್ರಂಭಣೆಯಿಂದ ನಡೆಯಿತು.

ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕರಾಗಿರುವ ಹಿದಾಯತ್ ಅಡ್ಡೂರ್‌ (Hidayath Addoor)ಕೋವಿಡ್ ಸಂದರ್ಭದಲ್ಲಿ ದುಬೈನಲ್ಲಿ ಕೋವಿಡ್ ವಾರಿಯರ್ ಆಗಿ ಮುಂಚೂಣಿಯಲ್ಲಿ ನಡೆಸಿದ ಸೇವೆಯನ್ನು ಹಾಗೂ ಕನ್ನಡ ಪರ ಸೇವೆಯನ್ನು ಗುರುತಿಸಿ ‘ಅಂತಾರಾಷ್ಟ್ರೀಯ ವಿಶ್ವ ಮಾನ್ಯ’ ಪ್ರಶಸ್ತಿಯನ್ನು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ – ಸಿಎಂ ಸಭೆಯಲ್ಲಿ ಏನಾಯ್ತು?

ಈ ಸಂದರ್ಭದಲ್ಲಿ ಶೇಕ್ ಮಜೀದ್ ರಾಶದ್ ಅಲ್ ಮುಲ್ಲಾ ಅವರ ಸಿಒಒ ಕಬೀರ್ ಕೆವಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ ಸೋಮಶೇಖರ್, ಕರ್ನಾಟಕ ಪ್ರೆಸ್ ಕೌನ್ಸಿಲ್ ಕ್ಲಬ್ ಅಧ್ಯಕ್ಷರಾದ ಡಾ. ಶಿವಕುಮಾರ್ ನಾಗರನವಿಲೆ, ಸದನ್ ದಾಸ್ ಉಪಸ್ಥಿತರಿದ್ದರು. ಇದನ್ನೂ ಓದಿ: ಹಿಜಬ್ ವಿವಾದ – ಫಿಫಾ ವಿಶ್ವಕಪ್‍ನಲ್ಲಿ ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್

Live Tv

Leave a Reply

Your email address will not be published. Required fields are marked *

Back to top button