ಕಲಬುರಗಿ: ಪದೇ ಪದೇ ಕನ್ನಡಿಗರ ಸ್ವಾಭಿಮಾನಕ್ಕೆ ಕಿಚ್ಚಿಡುವ ಕೆಲಸ ಮಾಡುತ್ತಿರೋ ಮರಾಠಾ ಪುಂಡರಿಗೆ ಕೌಂಟರ್ ನೀಡುವ ಪ್ರಯತ್ನವಾಗಿ ಜೈ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಮಹಾರಾಷ್ಟ್ರ ಬಸ್ (Maharashtra Bus) ನಾಮಫಲಕಕ್ಕೆ ಕಪ್ಪು ಮಸಿ ಬಳಿಯುವ ಮೂಲಕ ಪಂಥಾಹ್ವಾನ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಸಿಬ್ಬಂದಿಗೆ ಮಸಿ ಬಳಿದ ಪ್ರಕರಣಕ್ಕೆ ಪ್ರತ್ಯುತ್ತರವಾಗಿ ನಗರದ ಆಳಂದ ಚೆಕ್ ಪೋಸ್ಟ್ ಬಳಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ ತಡೆದ ಜೈ ಕರ್ನಾಟಕ ಕಾರ್ಯಕರ್ತರು ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ಮರಾಠಾ ಪುಂಡರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ – ವಿಧಾನಸೌಧ, ರಾಜಭವನ ಸೇರಿ 258 ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟೀಸ್
ಮಹಾರಾಷ್ಟ್ರ ಸಾರಿಗೆ ಬಸ್ ನಾಮಫಲಕಕ್ಕೆ ಕಪ್ಪು ಮಸಿ ಬಳಿದ ಕಾರ್ಯಕರ್ತರು ಬಳಿಕ ಬಸ್ ಮೇಲೆ ಕನ್ನಡ ಧ್ವಜ ನೆಟ್ಟು ನಂತರ ಬಸ್ ಚಾಲಕನಿಗೆ ಹೂವಿನ ಹಾರ ಹಾಕಿ ಕನ್ನಡ ಪರ ಘೋಷಣೆಗಳನ್ನು ಮೊಳಗಿಸಿದರು. ಇದನ್ನೂ ಓದಿ: ದಾಖಲೆ ಕಳವು ಆರೋಪ – ಐಜಿಪಿ ರೂಪಾ ವಿರುದ್ಧ ಸಿಎಸ್‌ಗೆ ಡಿಐಜಿ ವರ್ತಿಕಾ ಕಟಿಯಾರ್ ದೂರು
ಇನ್ಮುಂದೆ ವಿನಾಕಾರಣ ಕನ್ನಡಿಗರ ತಂಟೆಗೆ ಬಂದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.