ಬೆಂಗಳೂರು: ತೆರಿಗೆ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಅಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ (D.K.Suresh) ಹೇಳಿದ್ದಾರೆ.
ಹಿಂದೂಗಳ ಟ್ಯಾಕ್ಸ್ ಹಿಂದೂಗಳಿಗೆ ಕೊಡಬೇಕು ಎಂಬ ಹರೀಶ್ ಪೂಂಜಾ (Harish Poonja) ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಳ್ಳೆಯದು, ಒಬೊಬ್ಬರು ಒಂದೊಂದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರೂ ಮೌನವಾಗಿದ್ರು. ಇಂದು ಚರ್ಚೆ ವ್ಯಾಖ್ಯಾನ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ನಿರಂತರವಾಗಿ ಕರ್ನಾಟಕದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಇದನ್ನೂ ಓದಿ: ನಮ್ಮದು ಹೆದರುವ ಬ್ಲಡ್ ಅಲ್ಲ, ತಂಟೆಗೆ ಬಂದವರಿಗೆ ಸೆಟ್ಲ್ಮೆಂಟ್ ಆಗುತ್ತಿದೆ: ಡಿಕೆಶಿ
Advertisement
Advertisement
ನಮ್ಮ ತೆರಿಗೆ ಪಾಲು ಎಷ್ಟಿದೆ ಎಂದು ವರದಿ ಮಾಡ್ತೀದ್ದೀರಾ. ಬೇರೆ ರಾಜ್ಯಕ್ಕೆ ಎಷ್ಟು ಟ್ಯಾಕ್ಸ್ ಕೊಡ್ತೀರಾ? ಕರ್ನಾಟಕ ರಾಜ್ಯಕ್ಕೆ ಎಷ್ಟು ತೆರಿಗೆ ಪಾಲು ಬರುತಿದೆ? ಯಾವೆಲ್ಲ ಯೋಜನೆಗಳು ಕರ್ನಾಟಕಕ್ಕೆ ಸಿಕ್ಕಿದೆ. ಎಷ್ಟು ವರ್ಷಗಳಿಂದ ಯೋಜನೆಗಳು ರಾಜ್ಯಕ್ಕೆ ಸಿಗುತ್ತಿದೆ? ಎಲ್ಲದರಲ್ಲೂ ತಡೆದುಕೊಳ್ಳಬೇಕಾ ನಾವು? ನ್ಯಾಷನಲ್ ಹೈವೇ ಜಾಸ್ತಿ ಆಗಿದೆ. ಯೋಜನೆ ತಡೆದಿದ್ದಾರೆ ಅಂದರೆ ಯಾರನ್ನು ಕೇಳಬೇಕು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿಯವರ 10 ವರ್ಷ ರಾಜ್ಯಕ್ಕೆ ಅನ್ಯಾಯದ ಕಾಲ: ಸಿದ್ದರಾಮಯ್ಯ
Advertisement
Advertisement
ನಾನೇನು ಭಾರತದ ವಿರೋಧಿ ಅಲ್ಲ. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇನೆ. ನಾನು ಸಂವಿಧಾನ ಆಶಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ದೇಶದ್ರೋಹಿ ಎಂದು ಕೊಲ್ಲುವ ಇಚ್ಛಾಶಕ್ತಿ ಇದ್ದರೆ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ. ಈಶ್ವರಪ್ಪ (Eshwarappa) ಅವರೇ ಖಂಡಿತ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ರೆಡಿಯಾಗಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿದ್ದರಾಮಯ್ಯ
ನಮಗೆ 13 ಪೈಸೆ ಸಾಕು ಅಂದರೆ ಅದನ್ನೇ ಹೇಳಲಿ. ನಾವೂ ಉದ್ಯೋಗ ಕೊಡ್ತಿದ್ದೇವೆ, ಬದುಕು ಕೊಡ್ತಿದ್ದೇವೆ, ನೀರು ಕೊಡ್ತಿದ್ದೇವೆ. ತೆರಿಗೆಯಲ್ಲಿ ಆಗುತ್ತಿರುವ ವಂಚನೆ ಎಷ್ಟು ದಿನ ಸಹಿಸಲಿ. ಬೇಕಾದರೆ ಆರ್.ಅಶೋಕ್ (R.Ashok) ಚರ್ಚೆಗೆ ಬರಲಿ ಮಾತಾಡೋಣ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್ ಶಾ ಘೋಷಣೆ