ಈವರೆಗೂ ಭಾರತದ ಟಾಪ್ ನಟರ ಸ್ಥಾನದಲ್ಲಿ ಕನ್ನಡದ (Sandalwood) ನಟರಿಗೆ ಯಾವ ಸ್ಥಾನಗಳು ದೊರೆಯುತ್ತಿರಲಿಲ್ಲ. ಕೇವಲ ಬಾಲಿವುಡ್ ನಟರು ಮಾತ್ರ ಆ ಸ್ಥಾನಗಳಲ್ಲಿ ಮೆರೆಯುತ್ತಿದ್ದರು, ಹೆಚ್ಚೆಂದರೆ ತಮಿಳು ಮತ್ತು ತೆಲುಗು ನಟರು ಇರುತ್ತಿದ್ದರು. ಇದೀಗ ಕನ್ನಡದ ನಟರಿಗೂ ಅಲ್ಲಿ ಸ್ಥಾನ ಸಿಗುತ್ತಿದೆ. ಕೆಜಿಎಫ್ ಸಿನಿಮಾವೊಂದು ಇಂತಹ ಸ್ಥಾನ ದೊರೆಕಿಸಿ ಕೊಡಲು ಯಶ್ (Yash) ಗೆ ನೆರವಾಗಿದೆ. ಹಾಗಾಗಿ ಯಶ್ ಭಾರತೀಯ ಟಾಪ್ ನಟರ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಪ್ರತಿ ವರ್ಷವೂ ಕೆಲ ಸಂಸ್ಥೆಗಳು ಭಾರತದ ಟಾಪ್ ನಟರ ಲಿಸ್ಟ್ ಅನ್ನು ಬಿಡುಗಡೆ ಮಾಡುತ್ತವೆ. ಈ ಬಾರಿ ಆಮ್ಯಾರ್ಕ್ಸ್ ಸಂಸ್ಥೆಯು ಟಾಪ್ ನಟರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ದಳಪತಿ ವಿಜಯ್ (Dalpati Vijay) ಟಾಪ್ 1 ಸ್ಥಾನವನ್ನು ಪಡೆದುಕೊಂಡಿದ್ದರೆ, ಯಶ್ ಗೆ ಟಾಪ್ 5 ಸ್ಥಾನ ಸಿಕ್ಕಿದೆ. ಪ್ರಭಾಸ್ (Prabhas) ಎರಡನೇ ಸ್ಥಾನ, ಜ್ಯೂನಿಯರ್ ಎನ್.ಟಿ.ಆರ್ ಮೂರನೇ ಸ್ಥಾನ ಹಾಗೂ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಟಾಪ್ 5 ಪಟ್ಟಿಯಲ್ಲಿ ದಕ್ಷಿಣದವರಿಗೆ ಸ್ಥಾನ ಸಿಕ್ಕಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು
Advertisement
Advertisement
ಮತ್ತೊಂದು ಅಚ್ಚರಿಯ ಸಂಗತಿಯಂದರೆ, ಬಾಲಿವುಡ್ ನಟರಲ್ಲಿ ಕೇವಲ ಅಕ್ಷಯ್ ಕುಮಾರ್ (Akshay Kumar) ಗೆ ಮಾತ್ರ ಸ್ಥಾನ ದೊರೆತಿದ್ದು ಆರನೇ ಸ್ಥಾನದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಲಿವುಡ್ ನ ಖ್ಯಾತ ನಟರು ದೂರವೇ ಉಳಿಯುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅಲ್ಲಿಗೆ ದಕ್ಷಿಣದವರೇ ಪ್ರಾಬಲ್ಯ ಮೆರೆದಿದ್ದಾರೆ. ಖಾನ್ ಪಡೆಯ ಒಬ್ಬನೇ ಒಬ್ಬ ನಟನೂ ಕೂಡ ಈ ಯಾದಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
Advertisement
ಕೆಜಿಎಫ್ ಸಿನಿಮಾದ ಮೂಲಕ ಭಾರತೀಯ ಸಿನಿಮಾ ರಂಗದ ಗತಿಯನ್ನೇ ಬದಲಿಸಿರುವ ಯಶ್, ಯಾವುದೇ ಸಂಸ್ಥೆಗಳು ಟಾಪ್ (Top) ಪಟ್ಟಿಯನ್ನು ಬಿಡುಗಡೆ ಮಾಡಿದರೂ, ಅದರಲ್ಲಿ ಒಂದು ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಜಿಎಫ್ (KGF)ಸಿನಿಮಾದ ನಂತರ ಬೇರೆ ಯಾವ ಸಿನಿಮಾವನ್ನೂ ಯಶ್ ಒಪ್ಪಿಕೊಳ್ಳದೇ ಇದ್ದರೆ, ಟಾಪ್ ನಲ್ಲಿ ಮಾತ್ರ ಸ್ಥಾನ ಪಡೆದುಕೊಳ್ಳುತ್ತಿರುವುದು ವಿಶೇಷ.