ದೇಶದಲ್ಲಿ ಎರಡನೇ ಲಾಕ್‍ಡೌನ್ ಆರಂಭವಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿರಬೇಕು. ಹೀಗಾಗಿ ಅನೇಕ ಬ್ಯಾಚುರಲ್ಸ್ ತಮ್ಮ ಮನೆಗೆ ಹೋಗಲು ಸಾಧ್ಯವಾಗದೆ ಇರುವಲ್ಲಿಯೇ ಉಳಿದುಕೊಂಡಿರುತ್ತಾರೆ. ಹೊರಗೆ ಹೋಗಿ ಊಟ ಮಾಡೋಣ ಅಂದರೆ ಹೋಟೆಲ್ ತೆರೆದಿರುವುದಿಲ್ಲ. ಇನ್ನೂ ಮನೆಯಲ್ಲಿಯೂ ಯಾವಾಗಲೂ ತರಕಾರಿ ಇರುವುದಿಲ್ಲ. ಹೀಗಾಗಿ ಸಿಂಪಲ್ ಆಗಿ ಈರುಳ್ಳಿ, ಟೊಮೆಟೋ ಇಲ್ಲದೆ ಗೊಜ್ಜು ಮಾಡುವ ವಿಧಾನ ಇಲ್ಲಿದೆ…
Advertisement
ಬೇಕಾಗುವ ಸಾಮಾಗ್ರಿಗಳು
1. ಕಡಲೆಬೀಜ (ಶೇಂಗಾ)- 1/2 ಕಪ್
2. ಬ್ಯಾಡಗಿ ಮೆಣಸಿನಕಾಯಿ- 10 ರಿಂದ 12
3. ದನಿಯಾ – 1 ಟೀ ಸ್ಪೂನ್
4. ಮೆಂತೆ ಕಾಳು – 1/2 ಟೀ ಸ್ಪೂನ್
5. ಬಿಳಿ ಎಳ್ಳು – 1 ಟೀ ಸ್ಪೂನ್
6. ಕಾಳು ಮೆಣಸು – 8 ರಿಂದ 10
7. ಹುಣಸೆ ಹಣ್ಣು – 50 ಗ್ರಾಂ
8. ಎಣ್ಣೆ- ಕರಿಯಲು
9. ಉದ್ದಿನ ಬೇಳೆ – 1 ಚಮಚ
10. ಕಡಲೆ ಬೇಳೆ – 1 ಚಮಚ
11. ಇಂಗು – ಚಿಟಿಕೆ
12. ಕರಿಬೇವು- 10 ರಿಂದ 12 ದಳ
13. ಅರಿಶಿಣ- ಚಿಟಿಕೆ
14. ಉಪ್ಪು – ರುಚಿಗೆ ತಕ್ಕಷ್ಟು
15. ಅಚ್ಚು ಬೆಲ್ಲದ ಪುಡಿ – 2 ಚಮಚ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಒಂದು ಬೌಲ್‍ನಲ್ಲಿ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿಕೊಳ್ಳಿ.
* ಎರಡನೇಯಾದಾಗಿ ಕಡಲೆ ಬೀಜಗಳನ್ನು ಹುರಿದುಕೊಂಡು, ಸಿಪ್ಪೆಯಿಂದ ಬೇರ್ಪಡಿಸಿ. ಕಾಳನ್ನು ಎರಡು ಎಸಳು ಮಾಡಿಕೊಂಡು ಎತ್ತಿಟ್ಟುಕೊಳ್ಳಿ.
* ಈಗ ಬ್ಯಾಡಗಿ ಮೆಣಸಿನಕಾಯಿಗಳನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. (ಒಂದು ವೇಳೆ ಬ್ಯಾಡಗಿ ಮೆಣಸಿನಕಾಯಿ ಇರದಿದ್ರೆ ಅಚ್ಚ ಖಾರದ ಪುಡಿ ಬಳಸಬಹುದು)
* ದನಿಯಾ, ಮೆಂತೆ, ಬಿಳಿ ಎಳ್ಳು, ಕಾಳು ಮೆಣಸು ಎಲ್ಲವನ್ನು ಹುರಿದುಕೊಳ್ಳಬೇಕು. ತುಂಬಾ ಕಪ್ಪು ಆಗದಂತೆ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕು.
* ಮೆಣಸಿನಕಾಯಿ, ಹುರಿದಿಟ್ಟುಕೊಂಡಿರುವ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.
Advertisement
* ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟುಕೊಂಡು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ನಂತರ ಸ್ಟೌವ್ ಸ್ಲೋ ಮಾಡಿಕೊಂಡು ಉದ್ದಿನಬೇಳೆ, ಕಡಲೆ ಬೇಳೆ, ಇಂಗು, ಕರಿಬೇವು, ಕಡಲೆ ಬೀಜ, ಅರಿಶಿಣ ಹಾಕಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ನೆನೆಸಿಟ್ಟಿದ್ದ ಹುಣಸೆ ಹಣ್ಣಿನ ರಸವನ್ನು ಒಗ್ಗರಣೆಗೆ ಹಾಕಿ.
* ಹುಣಸೆ ರಸ ಹಾಕುತ್ತಿದ್ದಂತೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕಡಿಮೆ ಉರಿಯುಲ್ಲಿ 5-6 ನಿಮಿಷ ಕುದಿಸಿ.
* ನಂತರ ಪುಡಿ ಮಾಡಿಕೊಂಡಿದ್ದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
* ಮಿಶ್ರಣ ಕುದಿಯುತ್ತಿರುವಾಗ ಬೆಲ್ಲದ ಪುಡಿ ಸೇರಿಸಿ 2-3 ನಿಮಿಷ ಕುದಿಸಿದರೆ ಗೊಜ್ಜು ಸಿದ್ಧ.