ಬೆಂಗಳೂರು: ಕರ್ನಾಟಕ ರಾಜ್ಯೋತ್ಸವಕ್ಕೆ (Kannada Rajyotsava) ಸರ್ಕಾರ ಕಡ್ಡಾಯ ಬಾವುಟ (Kannada Flag) ಕಡ್ಡಾಯಗೊಳಿಸಿದೆ. ಹೀಗಾಗಿ ಬರುವ ತಿಂಗಳು 1ನೇ ತಾರೀಖಿನಂದು ಎಲ್ಲಾ ಶಾಲೆ- ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಲೇಬೇಕೆಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಬಾವುಟಗಳಿಗೆ ಭಾರೀ ಬೇಡಿಕೆ ಬಂದಿದೆ.
ಈ ಬಾರಿಯ ನ.1ಕ್ಕೆ ಕರ್ನಾಟಕ ಏಕೀಕರಣಗೊಂಡು 50 ವರ್ಷವಾಗಲಿದೆ. ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಶಾಲೆ-ಕಾಲೇಜು, ಕಂಪನಿಗಳು, ಐಟಿಬಿಟಿ ಕಂಪನಿಗಳು ಹಾಗೂ ಕಾರ್ಖಾನೆಗಳು ಕೂಡ ನವೆಂಬರ್ 1ರಂದು ಕನ್ನಡ ಬಾವುಟ ಹಾರಿಸಲೇಬೇಕೆಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೇನೂ ನ.1ಕ್ಕೆ ಕೇವಲ 15 ದಿನಗಳು ಬಾಕಿ ಉಳಿದಿವೆ. ಹೀಗಾಗಿ ಎಲ್ಲಾ ವರ್ಷಕ್ಕಿಂತ ಈ ವರ್ಷ ಕನ್ನಡ ಬಾವುಟಗಳಿಗೆ ಬೇಡಿಕೆ ಹೆಚ್ಚಿದೆ.
Advertisement
Advertisement
ಇನ್ನೂ ಈ ಕನ್ನಡ ಬಾವುಟಗಳು ಕಾಟನ್, ಪಾಲಿಸ್ಟರ್, ಸಿಲ್ಕ್ ಬಟ್ಟೆಗಳಲ್ಲಿ ತಯಾರಾಗುತ್ತಿವೆ. ಒಂದೊಂದಕ್ಕೆ ಒಂದೊಂದು ಬೆಲೆ ಇದೆ. ನಗರದ ಖಾದಿ ಭಂಡಾರ ಸೇರಿದಂತೆ ಬೇರೆ ಬೇರೆ ಖಾಸಗಿ ಅಂಗಡಿಗಳಲ್ಲಿ ಕನ್ನಡ ಬಾವುಟಗಳ ಬೆಲೆ ಹೆಚ್ಚಾಗಿದೆ. 200 ರೂ.ನಿಂದ 700 ರೂ. ªಬಾವುಟಗಳು ಮಾರಾಟವಾಗುತ್ತಿವೆ. ಈಗಾಗಲೇ ಸರ್ಕಾರದ ಕಚೇರಿಗಳು, ವಿವಿಧ ಕಂಪನಿಗಳು ಕನ್ನಡ ಧ್ವಜವನ್ನು ಕೊಳ್ಳುತ್ತಿದ್ದಾರೆ. ಕನ್ನಡ ಬಾವುಟದ ಜೊತೆಗೆ ಶಾಲು, ಬ್ಯಾಡ್ಜ್ ಗಳನ್ನು ಸಹ ಕೊಳ್ಳುತ್ತಿದ್ದಾರೆ.
Advertisement
Advertisement
ಸರ್ಕಾರದ ಆದೇಶ ಖಾದಿ, ನೇಕಾರಿಗೆ ಹಾಗೂ ವ್ಯಾಪಾರಿಗಳಲ್ಲಿ ಮತ್ತೆ ಮರು ಚೈತನ್ಯವನ್ನುಂಟುಮಾಡಿದೆ. ಅಷ್ಟೇ ಅಲ್ಲದೇ ಇಡೀ ಕರುನಾಡಲ್ಲಿ ಕನ್ನಡ ಬಾವುಟ ನವೆಂಬರ್ 1ರಂದು ರಾರಾಜಿಸಲಿದೆ.