ಕಾರವಾರ: ರಾಜ್ಯಾದ್ಯಂತ 66ನೇ ಕನ್ನಡ ರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶಿಷ್ಟ ರೀತಿಯ ಆಚರಣೆ ಮೂಲಕ ಕನ್ನಡಿಗರು ಕನ್ನಡತನದ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ಕನ್ನಡ ಧ್ವಜ ಹಾರಾಡಿಸಿ ಸಂಸ್ಥೆಯೊಂದು ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದೆ.
Advertisement
66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುರುಡೇಶ್ವರದ ನೇತ್ರಣಾಣಿ ನಡುಗಡ್ಡೆ ಭಾಗದದ ಅರಬ್ಬಿ ಸಮುದ್ರದಾಳದಲ್ಲಿ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯು ಸ್ಕೂಬಾ ಡೈವಿಂಗ್ ಮಾಡುವ ಸಾಹಸಿಗಳ ಮೂಲಕ ಸಮುದ್ರದಾಳದಲ್ಲಿ 20 ಅಡಿ ಉದ್ದದ ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಿತು. ಇದನ್ನೂ ಓದಿ: ಆಸ್ಪತ್ರೆಯಿಂದ ರಜನಿಕಾಂತ್ ಡಿಸ್ಚಾರ್ಜ್ – ಮನೆಗೆ ಆಗಮಿಸಿ ದೇವರಿಗೆ ಪ್ರಾರ್ಥನೆ
Advertisement
ಮುರುಡೇಶ್ವರದ ನೇತ್ರಾಣಿ ಅಡ್ವೇಂಚರ್ ಜಲಸಾಹಸ ಸಂಸ್ಥೆಯ ಗಣೇಶ್ ಹರಿಕಾಂತ ಅವರ ಮಾರ್ಗದರ್ಶನದಲ್ಲಿ ಆರು ಜನ ಯುವಕರ ತಂಡ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಸಮುದ್ರದ 200 ಅಡಿ ಆಳಕ್ಕೆ ಇಳಿದು ಅಲ್ಲಿ ಕನ್ನಡ ಧ್ವಜವನ್ನು ಹಾರಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್‌ಗೆ ಬಂದ `ರಾಜಕುಮಾರ’
Advertisement
Advertisement
ನಂತರ ಮುರುಡೇಶ್ವರದ ಕಡಲಲ್ಲಿ ಕನ್ನಡ ಧ್ವಜ ಹಿಡಿದು ಪ್ರದರ್ಶಿಸಿ ಕನ್ನಡ ಅಭಿಮಾನ ಮೆರೆದರು.