ಕರ್ನಾಟಕ ಸರಕಾರವು ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 (Rajyotsava 2023) ಪ್ರಕಟಿಸಿದ್ದು, ನಾನಾ ಕ್ಷೇತ್ರದ ಗಣ್ಯರಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಿನಿಮಾ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಹಿರಿಯ ನಟರಾದ ಡಿಂಗ್ರಿ ನಾಗರಾಜ್ (Dingri Nagaraj) ಮತ್ತು ಬ್ಯಾಂಕ್ ಜನಾರ್ದನ್ (Bank Janardhan) ಅವರಿಗೆ ಈ ಬಾರಿಯ ಪ್ರಶಸ್ತಿ ಸಂದಿದೆ. ಇದನ್ನೂ ಓದಿ:Bigg Boss Kannada: ವರ್ತೂರ್ ಸಂತೋಷ್‌ಗೆ ಗೆಟೌಟ್ ಸ್ವಾಗತ
ಡಿಂಗ್ರಿ ನಾಗರಾಜ್ ಮತ್ತು ಬ್ಯಾಂಕ್ ಜನಾರ್ದನ್ ಅವರಿಗೆ ಸಿನಿಮಾ ಕ್ಷೇತ್ರದ ವಿಭಾಗದಲ್ಲಿ ಪ್ರಶಸ್ತಿ ಘೋಷಣೆ ಆಗಿದ್ದರೆ, ಸಂಕೀರ್ಣ ವಿಭಾಗದಲ್ಲಿ ಮಿಮಿಕ್ರಿ ದಯಾನಂದ್ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಮೂವರು ಹಲವು ದಶಕಗಳ ಕಾಲ ಮನರಂಜನಾ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
Advertisement
ಪ್ರಶಸ್ತಿ ಪಟ್ಟಿ:
Advertisement
ಸಂಗೀತ/ನೃತ್ಯ ಕ್ಷೇತ್ರ: ಡಾ. ನಯನ ಎಸ್ ಮೋರೆ, ಶ್ರೀಮತಿ ನೀಲಾ ಎಂ ಕೊಡ್ಲಿ, ಶ್ರೀ ಶಬ್ಬೀರ್ ಅಹಮದ್, ಡಾ. ಎಸ್ ಬಾಳೇಶ ಭಜ್ರಂತಿ ಅವರಿಗೆ ಪ್ರಶಸ್ತಿ ಲಭಿಸಿದೆ.
Advertisement
ರಂಗಭೂಮಿ ಕ್ಷೇತ್ರ: ಎಜಿ ಚಿದಂಬರ ರಾವ್ ಜಂಬೆ, ಪಿ ಗಂಗಾಧರ ಸ್ವಾಮಿ, ಹೆಚ್‌ಬಿ ಸರೋಜಮ್ಮ, ತಯ್ಯಬಖಾನ್ ಎಂ ಇನಾಮದಾರ, ವಿಶ್ವನಾಥ್ ವಂಶಾಕೃತ ಮಠ, ಪಿ ತಿಪ್ಪೇಸ್ವಾಮಿ.
Advertisement
ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ ಕ್ಷೇತ್ರ: ಟಿ ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಮಾರ್ಥಾ ಜಾಕಿಮೋವಿಚ್ ಮತ್ತು ಪಿ ಗೌರಯ್ಯ.
ಯಕ್ಷಗಾನ/ಬಯಲಾಟ ಕ್ಷೇತ್ರ: ಅರ್ಗೋಡು ಮೋಹನದಾಸ್ ಶೆಣೈ, ಕೆ ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ (ಹಂದಿಜೋಗಿ).
ಜಾನಪದ ಕ್ಷೇತ್ರ: ಹುಸೇನಬಿ ಬುಡೆನ್ ಸಾಬ್ ಸಿದ್ದಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಹೆಚ್‌ಕೆ ಕಾರಮಂಚಪ್ಪ, ಶಂಭು ಬಳಿಗಾರ, ವಿಭೂತಿ ಗುಂಡಪ್ಪ, ಚೌಡಮ್ಮ.
ಸಮಾಜಸೇವೆ ಕ್ಷೇತ್ರ: ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ರೂಪಾ ನಾಯಕ್, ನಿಜಗುಣಾನಂದ ಮಹಾಸ್ವಾಮಿಗಳು, ನಾಗರಾಜು ಜಿ.
ಆಡಳಿತ ಕ್ಷೇತ್ರ: ಜಿವಿ ಬಲರಾಮ್
ವೈದ್ಯಕೀಯ ಕ್ಷೇತ್ರ: ಡಾ. ಸಿ ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ.
ಸಾಹಿತ್ಯ ಕ್ಷೇತ್ರ: ಪ್ರೊ. ಸಿ ನಾಗಣ್ಣ, ಸುಬ್ಬು ಹೊಲೆಯಾರ್ (ಹೆಚ್‌ಕೆ ಸುಬ್ಬಯ್ಯ), ಸತೀಶ್ ಕುಲಕರ್ಣಿ, ಲಕ್ಷಿö್ಮÃಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ ಷರೀಫಾ.
ಶಿಕ್ಷಣ ಕ್ಷೇತ್ರ: ರಾಮಪ್ಪ (ರಾಮಣ್ಣ) ಹವಳೆ, ಕೆ ಚಂದ್ರಶೇಖರ್, ಕೆಟಿ ಚಂದು.
ಕ್ರೀಡಾ ಕ್ಷೇತ್ರ: ದಿವ್ಯ ಟಿಎಸ್, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ.
ನ್ಯಾಯಾಂಗ ಕ್ಷೇತ್ರ: ವಿ ಗೋಪಾಲಗೌಡ.
ಕೃಷಿ-ಪರಿಸರ ಕ್ಷೇತ್ರ:
ಸೋಮನಾಥರೆಡ್ಡಿ ಪೂರ್ಮಾ, ದ್ಯಾವನಗೌಡ ಟಿ. ಪಾಟೀಲ, ಶಿವರೆಡ್ಡಿ ಹನುಮರೆಡ್ಡಿ ವಾಸನ.
ಸಂಕೀರ್ಣ ಕ್ಷೇತ್ರ: ಎಎಂ ಮದರಿ, ಹಾಜಿ ಅಬ್ದುಲ್ಲಾ ಪರ್ಕಳ, ಮಿಮಿಕ್ರಿ ದಯಾನಂದ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕೊಡನ ಪೂವಯ್ಯ ಕಾರ್ಯಪ್ಪ.
ಮಾಧ್ಯಮ ಕ್ಷೇತ್ರ: ದಿನೇಶ ಅಮೀನ್‌ಮಟ್ಟು, ಜವರಪ್ಪ, ಮಾಯಾ ಶರ್ಮ, ರಫೀ ಭಂಡಾರ.
ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರ:
ಎಸ್. ಸೋಮನಾಥ್ ಶ್ರೀಧರ್ ಪನಿಕರ್, ಪ್ರೊ. ಗೋಪಾಲನ್ ಜಗದೀಶ್
ಹೊರನಾಡು/ ಹೊರದೇಶ ಕ್ಷೇತ್ರ: ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ.
ಸ್ವಾತಂತ್ರ್ಯ ಹೋರಾಟಗಾರ ಕ್ಷೇತ್ರ: ಪುಟ್ಟಸ್ವಾಮಿ ಗೌಡ.
10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ:
1. ಕರ್ನಾಟಕ ಸಂಘ
2. ಬಿಎನ್ ಶ್ರೀರಾಮ ಪುಸ್ತಕ ಪ್ರಕಾಶನ
3. ಮಿಥಿಕ್ ಸೊಸೈಟಿ
4. ಕನಾಟಕ ಸಾಹಿತ್ಯ ಸಂಘ
5. ಮೌಲಾನಾ ಅಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ(ರಿ)
6. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ
7. ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ
8. ಚಿಣ್ಣರ ಬಿಂಬ
9. ಮಾರುತಿ ಜನಸೇವಾ ಸಂಘ
10. ವಿದ್ಯಾದಾನ ಸಮಿತಿ