ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ದೈವ ನರ್ತಕ ಗುಡ್ಡ ಪಾಣಾರರಿಗೆ (Gudda Panara) ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಒಲಿದಿದೆ. ರಾಜ್ಯ ಸರ್ಕಾರ ಹೊರಡಿಸಿದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಹಳ್ಳಿಯ ಬಡವನಿಗೆ ಪ್ರಶಸ್ತಿ ನೀಡಿದ್ದು ಭಾರೀ ಖುಷಿಯಾಗಿದೆ ಎಂದು ಗುಡ್ಡ ಪಾಣಾರಾ ಸಂತಸ ವ್ಯಕ್ತಪಡಿಸಿದ್ದಾರೆ.
Advertisement
ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ತೀರ ಹಳ್ಳಿಯವ. ನಾನು ಬಡವ. ನನ್ನನ್ನು ಹುಡುಕಿ ರಾಜ್ಯ ಪ್ರಶಸ್ತಿ ಕೊಟ್ಟದ್ದು ನನಗೆ ಖುಷಿ ಮತ್ತು ಸಂತೋಷ ತಂದಿದೆ. ಖುಷಿ ಅಂದ್ರೆ ನನಗೆ ಅಷ್ಟಿಷ್ಟು ಖುಷಿಯಲ್ಲ. ತುಂಬಾ, ತುಂಬಾ ಖುಷಿಯಾಗಿದೆ ಎಂದು ತುಳುವಿನಲ್ಲೇ ಹೇಳಿದ್ದಾರೆ. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ – ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು
Advertisement
Advertisement
ಗ್ರಾಮದ 10 ಸಮಸ್ತರ ಸಹಕಾರದಿಂದ ಈ ಪ್ರಶಸ್ತಿ ಸಿಕ್ಕಿತು. ನಾನು ನಂಬಿಕೊಂಡು ಬಂದ ಧರ್ಮ ಮತ್ತು ದೇವರು, ಭಕ್ತರ ಸಹಕಾರದಿಂದ ಪ್ರಶಸ್ತಿ ಸಿಕ್ಕಿತು. ಕಳೆದ 38 ವರ್ಷಗಳಿಂದ ನಾನು ದೈವದ ಸೇವೆ ಮಾಡುತ್ತಿದ್ದೇನೆ. ಕಳೆದ 27 ವರ್ಷಗಳಿಂದ ನಾನು ಕಾಪುವಿನಲ್ಲಿ ಹುಲಿಭೂತ ಕಟ್ಟುತ್ತಿದ್ದೇನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಮನೆಯಲ್ಲಿನ ಅಪ್ಪು ಫೋಟೋ ವೈರಲ್
Advertisement
ನನಗೀಗ 68 ವರ್ಷ ವಯಸ್ಸಾಗಿದೆ. ಈವರೆಗೆ ನಾನು ಭೂತಾರಾಧನೆಯನ್ನು ಕಾಯಕವಾಗಿ ಮಾಡುತ್ತಿದ್ದೇನೆ. ಧರ್ಮದ ದಾರಿಯಲ್ಲಿ ನಡೆದಿದ್ದೇನೆ. ಮುಂದೆಯೂ ದೈವದೇವರ ಚಾಕರಿ ಮಾಡುವ ಶಕ್ತಿ ಕೊಡು ಎಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದಿದ್ದಾರೆ.