ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ (Belagavi) ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿತ್ತು. ನಗರದ ಚೆನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವದ ಸಂಭ್ರಮಾಚರಣೆ ಮಾಡಲಾಯಿತು. ಜಿಟಿಜಿಟಿ ಮಳೆಯಲ್ಲೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಕನ್ನಡಾಭಿಮಾನಿಗಳು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು.
ಇದೇ ಮೊದಲ ಬಾರಿಗೆ ರಾಜ್ಯೋತ್ಸವದಲ್ಲಿ ಸಿಡಿಮದ್ದು ಸಿಡಿಸಲಾಯಿತು. ಬಾನಲ್ಲಿ ಕನ್ನಡಮ್ಮನ ಚಿತ್ತಾರ ಮೂಡಿತು. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಕಾರ್ಯಕರ್ತರ ನೇತೃತ್ವದಲ್ಲಿ ಸಿಡಿಮದ್ದಿನ ಪ್ರದರ್ಶನ ಮಾಡಲಾಯ್ತು. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ವಿಶೇಷ – ಕನ್ನಡ ನಮ್ಮ ಹೆಗ್ಗುರುತು, ಅಸ್ತಿತ್ವವಷ್ಟೇ ಅಲ್ಲ, ಆತ್ಮಗೌರವವೂ ಹೌದು, ಇತಿಹಾಸವನ್ನೊಮ್ಮೆ ನೀವೂ ತಿಳಿಯಿರಿ..
ಮಧ್ಯರಾತ್ರಿಯಲ್ಲೇ ಬಣ್ಣಬಣ್ಣದ ಸಿಡಿಮದ್ದುಗಳ ಚಿತ್ತಾರಕ್ಕೆ ಕನ್ನಡಿಗರು ಫಿದಾ ಆದರು. ವರ್ಷದಿಂದ ವರ್ಷಕ್ಕೆ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡದ ಘಮಲು ಹೆಚ್ಚಾಗುತ್ತಿದೆ. ಕನ್ನಡ ಧ್ವಜಗಳ ಹಾರಾಟ ನಡೆಸಿ, ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಬೆಳಗಾವಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಇದನ್ನೂ ಓದಿ: ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬಸವಣ್ಣ, ನಾಲ್ವಡಿ, ದೇವರಾಜ ಅರಸು ಹೆಸರಿಡಲು ಸರ್ಕಾರ ಚಿಂತನೆ

