ಜ್ಯೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಚಿತ್ರದಲ್ಲಿ ಕನ್ನಡದ ನಟಿ ಚೈತ್ರಾ ರೈ

Public TV
1 Min Read
chaithra rai 1 2

‘ಆರ್‌ಆರ್‌ಆರ್’ (RRR) ಸೂಪರ್ ಸಕ್ಸಸ್ ನಂತರ ‘ಎನ್‌ಟಿಆರ್ 30’ ಚಿತ್ರದಲ್ಲಿ ತಾರಕ್ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ (Jr.ntr)  ಸಿನಿಮಾ ತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ತಾರಕ್ ಟೀಮ್‌ಗೆ ಬಾಲಿವುಡ್ (Bollywood) ಸ್ಟಾರ್ ಸೈಫ್ ಅಲಿ ಖಾನ್ (Saif Ali Khan) ಸೇರಿದ ಬಳಿಕ ಕನ್ನಡ ಕಿರುತೆರೆ ನಟಿಗೆ ಬಂಪರ್ ಆಫರ್ ಸಿಕ್ಕಿದೆ.

saif ali khan

ಕೊರಟಾಲ ಶಿವ ನಿರ್ದೇಶನದ ‘ಎನ್‌ಟಿಆರ್ 30’ ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದೆ. ತಾರಕ್- ಜಾನ್ವಿ ಕಪೂರ್ (Janhavi Kapoor)  ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಬಿಟೌನ್ ಸೂಪರ್ ಹೀರೋ ಸೈಫ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಶ್ರೀಲೀಲಾ ಹೀರೋಯಿನ್

chaithra rai 2

ತೆಲುಗಿನ ಈ ಸಿನಿಮಾ ಸೈಫ್ ಅಲಿ ಖಾನ್ ಪತ್ನಿ ಪಾತ್ರದಲ್ಲಿ ನಟಿಸಲು ಕರಾವಳಿ ನಟಿ ಚೈತ್ರಾ ರೈ (Chaithra Rai) ಅವರಿಗೆ ಚಾನ್ಸ್ ಸಿಕ್ಕಿದೆ. ಕನ್ನಡದ ರಾಧಾ ಕಲ್ಯಾಣ (Radha Kalyana) ಸೇರಿದಂತೆ ಹಲವು ಸೀರಿಯಲ್- ಸಿನಿಮಾಗಳಲ್ಲಿ ನಟಿಸಿದ್ದ ಚೈತ್ರಾ ಸೈಫ್‌ಗೆ ಪತ್ನಿಯಾಗಿ ಕಾಣಿಸಿಕೊಳ್ತಿದ್ದಾರೆ. ಚೈತ್ರಾ ರೈ ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಎಂದು ಹೇಳಲಾಗುತ್ತಿದೆ.

chaitra rai

ಕನ್ನಡ- ತೆಲುಗು ಸೀರಿಯಲ್‌ನಲ್ಲಿ ಚೈತ್ರಾ ಆಕ್ಟೀವ್ ಆಗಿದ್ದಾರೆ. ಸದ್ಯ ತೆಲುಗಿನ ‘ರಾಧಕು ನೀವರೆ ಪ್ರಣಾಮ್’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಚೈತ್ರಾ ನಟಿಸುತ್ತಿದ್ದಾರೆ.

Share This Article