ಬೆಂಗಳೂರು: ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ನಾಳೆ ಕರ್ನಾಟಕ ಬಂದ್‍ಗೆ ಕರ್ನಾಟಕ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟದೆ. ಈ ಒಕ್ಕೂಟದ ಕರೆಗೆ ಕನ್ನಡ ಪರ ಸಂಘಟನೆಗಳಲ್ಲೆ ವಿರೋಧ ವ್ಯಕ್ತವಾಗುತ್ತಿದೆ. ಬಂದ್ ಬೇಡಾ ಎಂದು ಬಂದ್ ವಿರೋಧಿಸಿ ಬೆಂಗಳೂರಿನ ಟೌನ್‍ಹಾಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
Advertisement
ಕರ್ನಾಟಕ ಹೋರಾಟಗಾರರ ಒಕ್ಕೂಟ, ಕರ್ನಾಟಕ ಕ್ರಾಂತಿರಂಗ ಮತ್ತು ಸರ್ವ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮಾಡಿವೆ. ಟೌನ್ ಹಾಲ್ ಮುಂದೆ ಪ್ರತಿಭಟಿಸಿ ಆಗ್ರಹಿಸಿದ ಅವರು, ನಾಳೆ ನಡೆಯುವ ಬಂದ್, ಜೋಕರ್ ಗಳ ಬಂದ್ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲಿಂಗೇಗೌಡ ಕಿಡಿಕಾರಿದರು.
Advertisement
Advertisement
ಕರ್ನಾಟಕ ಹೋರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ್ ಕುಮಾರ್ ಮಾತನಾಡಿ, ಇದೊಂದು ಅವೈಜ್ಞಾನಿಕ ಬಂದ್. ರೈತರಿಗೆ, ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ತೊಂದರೆ ಆಗುವ ಬಂದ್ ಇದು. ಕೆಲ ಸಂಘಟನೆ ಅವರು ತೀರ್ಮಾನ ತಗೊಂಡು ಬಂದ್ ಮಾಡುತ್ತಿದ್ದಾರೆ. ನಮ್ಮನ್ನು ಯಾರು ಕೇಳಿಲ್ಲ, ಕರೆದಿಲ್ಲ ಅವರಷ್ಟೇ ತೀರ್ಮಾನ ಮಾಡಿಕೊಂಡಿದ್ದಾರೆ. ಬಂದ್‍ಗೆ ನಮ್ಮ ಬೆಂಬಲ ಇಲ್ಲ. ಬಂದ್ ಬೇಡಾ ಉದ್ಯೋಗಕ್ಕಾಗಿ ಮಾಡ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸರೋಜಿನಿ ಮಹಿಷಿ ವರದಿ ಪರಿಷ್ಕೃತ ಆಗಿ ಜಾರಿಗೆ ಬರಬೇಕು ಅಷ್ಟೇ. ನಾಳೆ ಯಾರಾದರೂ ಅಂಗಡಿ ಮುಚ್ಚುಸಿದ್ರೆ, ಬಲವಂತವಾಗಿ ತೊಂದರೆ ಕೊಟ್ಟರೆ ಕಲ್ಲು, ದೊಣ್ಣೆ ತಗೊಂಡು ಹೊಡೆಯಿರಿ ಎಂದು ಕಿಡಿಕಾರಿದರು.