ಬೀದರ್: ಕೌಟುಂಬಿಕ ಕಲಹ (Family Dispute) ಹಿನ್ನೆಲೆ ಪತಿಯ ಅಣ್ಣ ಮಹಿಳೆಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyana) ಪಟ್ಟಣದಲ್ಲಿ ತ್ರೀಪುರಾಂತನಲ್ಲಿ ನಡೆದಿದೆ.
ಸಂಗೀತ ಶ್ರೀಧರ ಕಾಂಗೆ (35) ಕೊಲೆಯಾದ ಮಹಿಳೆ. ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಗಲಾಟೆಯಲ್ಲಿ ಹರಿತವಾದ ಆಯುಧದಿಂದ ಮಹಿಳೆಯ ಕೊಲೆ (Murder) ಮಾಡಿದ್ದು, ಹತ್ಯೆಯಾದ ಮಹಿಳೆ ಗೃಹ ರಕ್ಷಕ ದಳದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಇದನ್ನೂ ಓದಿ: ಅಪ್ರಾಪ್ತ ಮಕ್ಕಳ ಮದುವೆಗೆ ಮುಂದಾಗಿದ್ದ ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ
ಮಹಿಳೆಯ ಹತ್ಯೆಗೈದ ಆರೋಪಿ ಬಸವಕಲ್ಯಾಣ ನಗರಸಭೆಯಲ್ಲಿ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿದ್ದು, ಮನೆಯಲ್ಲಿ ಯಾರು ಇಲ್ಲದಿದ್ದಾಗ ಮಹಿಳೆಯೊಂದಿಗೆ ಜಗಳವಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಕ್ರಮ ಗೋಸಾಗಾಟ ವೇಳೆ ಅಡ್ಡಗಟ್ಟಿದ ಪೊಲೀಸರು – ಅಡ್ಡಾದಿಡ್ಡಿ ಚಾಲನೆಯಿಂದ ಕಂಟೈನರ್ ಪಲ್ಟಿ