ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ಮಲ್ಟಿಸ್ಟಾರ್ ಅಭಿನಯದ `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಸಂಕಷ್ಟ ಎದುರಾಗಿದೆ.
`ದಿ ವಿಲನ್’ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನವ ಚಕ್ರವರ್ತಿ ಸುದೀಪ್ ಒಟ್ಟಿಗೆ ಅಭಿನಯಿಸಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಸೆನ್ಸಾರ್ ಅಂಗಳದಲ್ಲಿದೆ. ಸೆನ್ಸಾರ್ ಮಂಡಳಿ `ದಿ ವಿಲನ್’ ಸಿನಿಮಾ ವೀಕ್ಷಿಸಿದ ಬಳಿಕ `ಎ’ ಸರ್ಟಿಫಿಕೇಟ್ ಕೊಡಲು ಮುಂದಾಗಿದೆ. ಆದರೆ `ಎ’ ಸರ್ಟಿಫಿಕೇಟ್ ಬಗ್ಗೆ ನಿರ್ದೇಶಕ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Advertisement
ಮಲ್ಟಿಪ್ಲೆಕ್ಸ್ ನಲ್ಲಿ `ಎ’ ಸರ್ಟಿಫಿಕೇಟ್ ನೀಡುವುದರಿಂದ ಹೆಚ್ಚಿನ ಎಫೆಕ್ಟ್ ಆಗುತ್ತದೆ ಎಂದು ಚಿತ್ರತಂಡದ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಸೆನ್ಸಾರ್ ಮಂಡಳಿ `ಯು’ ಸರ್ಟಿಫಿಕೇಟ್ ನೀಡಲು ಮುಂದಾಗಿದ್ದು, `ಯು’ ಸರ್ಟಿಫಿಕೇಟ್ ಬೇಕಾದರೆ ಸಿನಿಮಾದಲ್ಲಿಯ 10 ನಿಮಿಷದ ದೃಶ್ಯವನ್ನು ಕತ್ತರಿಸುವುದಕ್ಕೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
Advertisement
Advertisement
ಇತ್ತೀಚೆಗಷ್ಟೇ `ದಿ ವಿಲನ್’ ಚಿತ್ರತಂಡ ಅದ್ಧೂರಿಯಾಗಿ ಕಾರ್ಯವನ್ನು ಆಯೋಜನೆ ಮಾಡಿ ಅಲ್ಲಿ ಆಡಿಯೋ ಲಾಂಚ್ ಮಾಡಿತ್ತು. ಈ ಹಿಂದೆಯೂ ಕೂಡ `ದಿ ವಿಲನ್’ ಸಿನಿಮಾದ ಟೀಸರ್ ಬಿಡುಗಡೆಗೊಂಡಾಗ ವಿವಾದವೂ ಹುಟ್ಟಿಕೊಂಡಿತ್ತು. ಅನೇಕ ಕಾರಣಗಳನ್ನ ಮುಂದಿಟ್ಟು ಶಿವಣ್ಣ ಅವರಿಗೆ ಈ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಶಿವರಾಜ್‍ಕುಮಾರ್ ಅಭಿಮಾನಿಗಳು `ದಿ ವಿಲನ್’ ಸಿನಿಮಾ ಬಹಿಷ್ಕಾರ ಹಾಕುತ್ತೇವೆ ಎಂದು ಹಠ ಹಿಡಿದು, ಅನೇಕ ಷರತ್ತುಗಳನ್ನ ಮುಂದಿಟ್ಟಿದ್ದರು.
Advertisement
ಈ ಬಗ್ಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. “ಕಳೆದ ಕೆಲ ದಿನಗಳಿಂದ ಕೆಲ ಮಾಧ್ಯಮಗಳಲ್ಲಿ ಶಿವಣ್ಣ ಅವರ ವಿಚಾರವಾಗಿ ಪ್ರೇಮ್ ಅವರಿಗೆ ಅಸಮಾಧಾನವಿದೆ ಎಂದು ವರದಿಯಾಗಿತ್ತು. ಆದರೆ ಈ ಕುರಿತು ನಿರ್ಧಾರ ಮಾಡಬೇಕಾಗಿದ್ದು ಶಿವಣ್ಣ ಅವರು, ಒಂದೊಮ್ಮೆ ಶಿವಣ್ಣ ಅವರು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುತ್ತೇನೆ. ಸಿನಿಮಾ ಬಿಡುಗಡೆಗೂ ಮೊದಲೇ ಅಸಮಾಧಾನ ವ್ಯಕ್ತಪಡಿಸಿದರೆ ನಾನು ಏನು ಮಾಡಲು ಸಾಧ್ಯ. ಆದ್ದರಿಂದ ಸಿನಿಮಾ ಬಂದರೆ ನಿಮಗೆ ಈ ಕುರಿತು ಸಂಪೂರ್ಣ ಮಾಹಿತಿ ಲಭಿಸಲಿದೆ. ತಾಳ್ಮೆವಹಿಸಿ, ಅತೀ ಶೀಘ್ರದಲ್ಲಿ ನಿಮ್ಮ ಮುಂದೇ ಸಿನಿಮಾ ತರುತ್ತೇನೆ ಎಂದು ಹೇಳಿದ್ದರು.
ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೊಂದು ಮಲ್ಟಿ ಸ್ಟಾರ್ ಗಳ ಚಿತ್ರವಾಗಿದೆ. ಇದರಲ್ಲಿ ವಿಶೇಷತೆ ಎಂದರೆ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿರುವುದು. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv