Advertisements

ಮೇ 6ರಿಂದ ‘ಟಕ್ಕರ್’- ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಮನೋಜ್ ಕುಮಾರ್ ರೆಡಿ

ಬೆಳ್ಳಿ ಪರದೆಯ ಮೇಲೆ ಮೇ 6ರಿಂದ ಟಕ್ಕರ್ ಸಿನಿಮಾದ ಟ್ರಾವೆಲ್ ಶುರುವಾಗ್ತಿದೆ. ಸಾಕಷ್ಟು ಸ್ಪೆಷಾಲಿಟಿಗಳಿಂದ ಕೂಡಿರುವ ಟಕ್ಕರ್ ಸಿನಿಮಾ ಮೂಲಕ ಯುವ ಪ್ರತಿಭೆ ಮನೋಜ್ ಕುಮಾರ್ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಟೀಸರ್, ಮೇಕಿಂಗ್ ಹಾಗೂ ಹಾಡುಗಳ ಮೂಲಕ ಕುತೂಹಲ ಹುಟ್ಟು ಹಾಕಿರುವ ಈ ಸಿನಿಮಾದಲ್ಲಿ ಸೈಬರ್ ಕ್ರೈಂ ಕಥಾಹಂದರ, ಆಕ್ಷನ್ ಥ್ರಿಲ್ಲರ್ ಕಂಟೆಂಟ್ ಎಲ್ಲವನ್ನೂ ಹದವಾಗಿ ಬೆರೆಸಿ ಕಥೆ ಹೆಣೆದು ತೆರೆ ಮೇಲೆ ತರಲಾಗಿದೆ.

Advertisements

ಮಾಸ್ ಅಂಡ್ ಕ್ಲಾಸ್ ಎರಡು ಆಡಿಯನ್ಸ್‍ಗೆ ಇಷ್ಟವಾಗುವ ಟಕ್ಕರ್ ಸಿನಿಮಾದಲ್ಲಿ ಕನ್ನಡತಿ ಖ್ಯಾತಿ ರಂಜನಿ ರಾಘವನ್ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಅಂಬರೀಶ್, ಚಕ್ರವರ್ತಿ ಚಿತ್ರಗಳಲ್ಲಿ ಚಿಕ್ಕ ರೋಲ್‍ಗಳಲ್ಲಿ ಮಿಂಚಿರುವ ಮನೋಜ್ ಕುಮಾರ್ ನಾಯಕ ನಟನಾಗಿ ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ಕಾಲೇಜ್ ಹುಡುಗನಾಗಿ, ಲವರ್ ಬಾಯ್ ಆಗಿ ಭರ್ಜರಿ ಆಕ್ಷನ್ ಹೀರೋ ಆಗಿ ಮನೋಜ್ ಕಾಣಸಿಗಲಿದ್ದಾರೆ. ಇದನ್ನೂ ಓದಿ: ‘ಪಾನ್ ಇಂಡಿಯಾ’ ಸ್ಟಾರ್‌ಗೆ ‘ಪ್ಯಾನ್ ಇಂಡಿಯಾ’ ಸ್ಟಾರ್ ಗುನ್ನಾ – ಸುದೀಪ್ ಬೆನ್ನಿಗೆ ನಿಂತ ಸ್ಯಾಂಡಲ್‍ವುಡ್

Advertisements

ಶೂಟಿಂಗ್ ಮುಗಿಸಿ ರಿಲೀಸ್ ಹೊಸ್ತಿನಲ್ಲಿ ನಿಂತಿರುವ ಟಕ್ಕರ್ ಸಿನಿಮಾಗೆ ರಘು ಶಾಸ್ತ್ರಿ ಓಂಕಾರ ಹಾಕಿದ್ದಾರೆ. ಹೆಣ್ಣುಮಕ್ಕಳ ಮಾನ, ಪ್ರಾಣಕ್ಕೆ ಮಾರಕವಾಗಿರುವ ತಂತ್ರಜ್ಞಾನದ ಕುರಿತ ಕಥಾವಸ್ತು ಚಿತ್ರದಲ್ಲಿದೆ. ತಂತ್ರಜ್ಞಾನ ಹೇಗೆ ಜನರ ನೆಮ್ಮದಿ ಕೆಡಿಸುತ್ತಿದೆ ಮತ್ತು ಅದರಿಂದ ಹೇಗೆ ಎಚ್ಚರ ವಹಿಸಬೇಕು ಅನ್ನೋದನ್ನು ನಿರ್ದೇಶಕರು ಫ್ರೇಮ್ ಟು ಫ್ರೇಮ್ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

ಎಸ್ ಎಲ್ ಎನ್ ಕ್ರಿಯೇಷನ್ ಬ್ಯಾನರ್ ನಡಿ ನಾಗೇಶ್ ಕೋಗಿಲು ನಿರ್ಮಾಣ ಮಾಡಿರುವ ಟಕ್ಕರ್ ಸಿನಿಮಾಗೆ ಕದ್ರಿ ಮಣಿಕಾಂತ್ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ ನೀಡಿದ್ದಾರೆ. ನೆಗೆಟಿವ್ ರೋಲ್ ನಲ್ಲಿ ಭಜರಂಗಿ ಲೋಕಿ ಮಿಂಚಿದ್ದು, ಸಾಧುಕೋಕಿಲ, ಶ್ರೀಧರ್, ಜೈಜಗದೀಶ್, ಸುಮಿತ್ರ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

Advertisements

Advertisements
Exit mobile version