ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೀಗ ಫುಲ್ ಬ್ಯುಸಿ ಆ್ಯಕ್ಟರ್. ರುಸ್ತುಂ, ದ್ರೋಣ ಸೇರಿದಂತೆ ಶಿವಣ್ಣನ ಬಹು ನಿರೀಕ್ಷಿತ ಚಿತ್ರಗಳ ಸಾಲಿನಲ್ಲಿರುವ ಕವಚ ಚಿತ್ರದ ಚಿತ್ರೀಕರಣವೀಗ ಕಂಪ್ಲೀಟಾಗಿದೆ.
ಕವಚ ಮಲೆಯಾಳಂನ ಸೂಪರ್ ಹಿಟ್ ಚಿತ್ರ ಒಪ್ಪಂನ ರೀಮೇಕ್. ಒಂದು ಅದ್ಭುತವಾದ ಸಾಮಾಜಿಕ ಕಥಾ ಹಂದರ ಇರುವ ಈ ಚಿತ್ರದ ಒಟ್ಟಾರೆ ಕಥೆ ಮತ್ತು ಪಾತ್ರದ ಮೇಲಿನ ಪ್ರೀತಿಯಿಂದಲೇ ಶಿವರಾಜ್ ಕುಮಾರ್ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಇಶಾ ಕೊಪ್ಪೀಕರ್ ಶಿವಣ್ಣನಿಗೆ ಜೋಡಿಯಾಗಿ ನಟಿಸಿದ್ದಾರೆ.
ಸ್ವಮೇಕ್ ಚಿತ್ರಗಳತ್ತಲೇ ಹೆಚ್ಚಾಗಿ ಗಮನ ಕೇಂದ್ರೀಕರಿಸುವ ಶಿವರಾಜ್ ಕುಮಾರ್ ಅವರು ಪ್ರಭಾವ ಬೀರುವ ಕಥೆ ಇದ್ದಾಗ ರೀಮೇಕಿಗೂ ಸೈ ಅನ್ನುವುದುಂಟು. ಅದೇ ಮನಸ್ಥಿತಿಯಿಂದಲೇ ಅವರು ನಟಿಸುತ್ತಿರೋ ಚಿತ್ರ ಕವಚ.
ಅರ್ಜುನ್ ಜನ್ಯ ಸಂಗೀತ ನೀಡಿರೋ ಈ ಚಿತ್ರದಲ್ಲಿ ಈ ಹಿಂದೆ ಟಗರು ಚಿತ್ರದಲ್ಲಿ ಶಿವಣ್ಣನಿಗೆ ಜೊತೆಯಾಗಿದ್ದ ವಸಿಷ್ಟ ಸಿಂಹ ಕೂಡಾ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಸುಧಾ ಬೆಳವಾಡಿ ಮೊದಲಾದವರ ತಾರಾಗಣ ಹೊಂದಿರೋ ಈ ಚಿತ್ರದ ಪಾತ್ರ ತಮ್ಮನ್ನು ಪ್ರಭಾವಿಸಿದೆ ಅಂತ ಶಿವರಾಜ್ ಕುಮಾರ್ ಅವರೇ ಹೇಳಿಕೊಳ್ಳುವ ಮೂಲ ಕವಚದ ಬಗೆಗಿನ ಅಭಿಮಾನಿಗಳ ನಿರೀಕ್ಷೆ ಗರಿಗೆದರಿಕೊಂಡಿದೆ.
ತಾವು ನಟಿಸೋ ಚಿತ್ರಗಳಲ್ಲಿ ಮನೋರಂಜನೆಯ ಜೊತೆಗೇ ಸಮಾಜಕ್ಕೆ ಒಳಿತಾಗುವಂಥದ್ದೇನೋ ಹೇಳಬೇಕೆಂಬ ತುಡಿತ ಹೊಂದಿರೋ ಶಿವರಾಜ್ ಕುಮಾರರ್ ಅವರಿಗೆ ಅಂಥಾದ್ದೇ ಚಿತ್ರಗಳು ಸಾಲು ಸಾಲಾಗಿ ಸಿಗುತ್ತಿವೆ. ಭಿನ್ನವಾದ ಕಥಾ ಹಂದರ ಹೊಂದಿರೋ ಕವಚ ಕೂಡಾ ಶಿವರಾಜ್ ಕುಮಾರ್ ಅವರ ವೃತ್ತಿ ಬದುಕಿನಲ್ಲಿ ಮಹತ್ವದ ಚಿತ್ರವಾಗಿ ದಾಖಲಾಗೋ ಲಕ್ಷಣಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/