RX 100 ಸಿನಿಮಾ ಮೂಲಕ ಪಾಯಲ್ ರಜಪೂತ್ ಟಾಲಿವುಡ್‌ಗೆ ನಾಯಕಿಯಾಗಿ ಪಾದಾಪಣೆ ಮಾಡಿದ್ದರು. ಇದೀಗ ಮತ್ತೆ ಚೊಚ್ಚಲ ಸಿನಿಮಾ ನಿರ್ದೇಶಕನ ಜೊತೆ ಪಾಯಲ್ ಕೈಜೊಡಿಸಿದ್ದಾರೆ. ಟಾಪ್‌ಲೆಸ್ ಅವತಾರದ ಮೂಲಕ ‘ಹೆಡ್‌ಬುಷ್’ ಬ್ಯೂಟಿ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡದ ‘ಹೆಡ್‌ಬುಷ್’ ನಟಿ ಪಾಯಲ್ ರಜಪೂತ್ (Payal Rajput) ಅವರು RX 100 ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಹೇಳಿಕೊಳ್ಳುವಂತಹ ಬ್ರೇಕ್ ಅವರಿಗೆ ಸಿಗಲಿಲ್ಲ. ಆದರೂ ಪಾಯಲ್ ರಜಪೂತ್‌ಗೆ ಬೇಡಿಕೆ ಕಮ್ಮಿಯಾಗಿಲ್ಲ. ಕೈತುಂಬಾ ಸಿನಿಮಾಗಳು ಅವರ ಕೈಯಲ್ಲಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ
View this post on Instagram
ಇದೀಗ ತಮ್ಮ ಮೊದಲ ಸಿನಿಮಾ ನಿರ್ದೇಶಕ ಅಜಯ್ ಭೂಪತಿ (Ajay Bhupathi) ಜೊತೆ ‘ಮಂಗಳವಾರಂ’ (Mangalavaram) ಚಿತ್ರಕ್ಕೆ ಪಾಯಲ್ ಸಾಥ್ ನೀಡಿದ್ದಾರೆ. ನೀವು ನೋಡಿದರೆ ಈ ನೋಟವೇ ಸಾಕಷ್ಟು ವಿಷಯ ಹೇಳುತ್ತದೆ ಎಂಬ ಕ್ಯಾಪ್ಷನ್‌ನೊಂದಿಗೆ ಪಾಯಲ್ ರಜಪೂತ್ ಅವರು ಈ ಪೋಸ್ಟರ್ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಸಿನಿಮಾ ಬಗ್ಗೆ ಕೌತುಕ ಮೂಡಿಸಿದ್ದಾರೆ.
View this post on Instagram
ಚಿತ್ರದ ಪೋಸ್ಟರ್‌ನಲ್ಲಿ ನಟಿ ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ನಟಿ ಬೋಲ್ಡ್ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಏಬ್ಬಿಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಅಂದಹಾಗೆ, ಪಾಯಲ್ ಕಳೆದ ವರ್ಷ ಡಾಲಿ (Daali) ನಟನೆ, ನಿರ್ಮಾಣದ ‘ಹೆಡ್‌ಬುಷ್’ (Head Bush) ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.