ಚಿಕ್ಕೋಡಿ : ಮದುವೆ ಸಮಾರಂಭದಲ್ಲಿ ಸಾಮಾನ್ಯವಾಗಿ ಆಡಂಬರದ ಅಲಂಕಾರ ಮಾಡುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಮದುವೆಯಲ್ಲಿ ಕನ್ನಡದ ಕಂಪು ಸೂಸುವ ವಾತವರಣ ನಿರ್ಮಾಣವಾಗಿತ್ತು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ನಾಗಯ್ಯಾ ತೇರಣಿಮಠ ಅವರು ಮದುವೆ ಸಮಾರಂಭದಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡದ ಧ್ವಜಗಳು, ಕನ್ನಡದ ಶಾಲುಗಳು ಕಂಡು ಬಂದವು.
Advertisement
Advertisement
ನಾಗಯ್ಯಾ ತೇರಣಿಮಠ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ರೂಪಾ ಹಿರೇಮಠ ಅವರನ್ನು ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಖಾನಾಪುರ ಗ್ರಾಮದ ಬ್ರಹ್ಮ ಮಠದ ಸಿದ್ದೇಶ್ವರ ಸ್ವಾಮಿಜಿ ಸೇರಿದಂತೆ ಹಲವಾರು ಮಠದ ಶ್ರಿಗಳು ಈ ಕನ್ನಡದ ಮದುವೆಗೆ ಸಾಕ್ಷಿಯಾಗಿದ್ದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್ ನೆಹರೂ
Advertisement
Advertisement
ಮದುವೆಯ ಗಂಡು ಹೆಣ್ಣು ಹೂಮಾಲೆ ಜೊತೆಗೆ ಕನ್ನಡದ ಶಾಲು ಹಾಕಿಕೊಂಡು ಕನ್ನಡತನವನ್ನ ಪ್ರದರ್ಶನ ಮಾಡಿದರು. ಗಡಿಭಾಗದಲ್ಲಿ ಕನ್ನಡತನ ಮೆರೆಯುವ ಮೂಲಕ ಈ ಜೋಡಿ ಹೊಸತನಕ್ಕೆ ನಾಂದಿ ಹಾಡಿದೆ. ಇದನ್ನೂ ಓದಿ: ಇನ್ಮುಂದೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವಂತಿಲ್ಲ: ಸುನಿಲ್ ಕುಮಾರ್