ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡ ಪರ ಕಾರ್ಯಕರ್ತರು ಇಂದು ಬೆಳಗಿನ ಜಾವ 3.30ಕ್ಕೆ ಎಂಇಎಸ್ ಆಡಳಿತವಿರುವ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದರು.
ಪ್ರಥಮ ಬಾರಿಗೆ ಕನ್ನಡ ದ್ಚಜ ಹಾರಿಸಿ ಭುವನೇಶ್ವರಿ ದೇವಿ ಫೋಟೋ ಇಟ್ಟು ಪೂಜೆ ಸಲ್ಲಿಸಲಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾರಿಸಿರುವ ಕನ್ನಡ ಧ್ವಜ ತೆಗೆಯುವಂತೆ ಕಾರ್ಯಕರ್ತರ ಮನವೊಲಿಸಲು ಪ್ರಯತ್ನ ಮಾಡಿದರು. ಆದ್ರೆ ಕಾರ್ಯಕರ್ತರು ಪ್ರಾಣಬಿಡುತ್ತೇವೆ ಹೊರತು ಹಾರಿಸಿದ ಧ್ವಜ ತೆಗೆಯುವುದಿಲ್ಲ ಅಂತಾ ಪಟ್ಟು ಹಿಡಿದರು.
ಹಾರಿಸಿರುವ ಧ್ವಜ ತೆಗೆದರೆ ಗೇಟ್ ಕಂಬಕ್ಕೆ ನೇಣುಹಾಕಿಕೊಳ್ಳುವುದಾಗಿ ಕಾರ್ಯಕರ್ತರು ಬೆದರಿಕೆ ಹಾಕಿದರು. ಕರ್ನಾಟಕದಲ್ಲಿ ಕನ್ನಡ ದ್ವಜ ಹಾರಿಸಿದ್ದೇವೆ. ಮಹಾರಾಷ್ಟ್ರದಲ್ಲಿ ಅಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು ಪಾಲಿಕೆ ಮುಂದಿನ ಧ್ವಜ ತೆರವುಗೊಳಿಸಿದ್ರು.