ಮಂಗಳೂರು ಬನ್ಸ್ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ. ಜಿಲ್ಲೆಯ ಹೋಟೆಲ್‍ಗಳಲ್ಲಿ ಸರ್ವೇ ಸಾಮಾನ್ಯವಾಗಿ ಸಿಗುವ ಬನ್ಸ್, ಸ್ವಲ್ಪ ಸಿಹಿ ಮಿಶ್ರಿತ ಎಣ್ಣೆಯಲ್ಲಿ ಕರಿದು ಮಾಡುವಂತಹ ಅಡುಗೆಯಾಗಿದೆ. ಇದನ್ನು ಬೆಂಗಳೂರು ಮತ್ತಿತರ ಕಡೆಗಳಲ್ಲಿಯೂ ಮಾಡ್ತಾರೆ. ಆದ್ರೆ ಬೇರೆ ನಗರಗಳಲ್ಲಿ ಮಾಡುವ ಬನ್ಸ್ ಗೂ ಮಂಗಳೂರಿನಲ್ಲಿ ಮಾಡುವ ಬನ್ಸ್ ಗೂ ರುಚಿಯಲ್ಲಿ ವ್ಯತ್ಯಾಸವಿದೆ. ಮಂಗಳೂರು ಬನ್ಸ್ ಮಾಡು ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
1. ಮೈದಾ ಹಿಟ್ಟು – 3 ಕಪ್
2. ಸಕ್ಕರೆ – ಅರ್ಧ ಕಪ್(ನಿಮಗೆ ಎಷ್ಟು ಸಿಹಿ ಬೇಕೋ ಅದಕ್ಕೆ ಅನುಗುಣವಾಗಿ ಬಳಸಿ)
3. ಮೊಸರು – ಅರ್ಧ ಕಪ್
4. ಅಡುಗೆ ಸೋಡಾ – 1 ಚಿಟಿಕೆ
5. ಬಾಳೆಹಣ್ಣು – 2
6. ಜೀರಿಗೆ – ಸ್ವಲ್ಪ
7. ಎಣ್ಣೆ – ಕರಿಯಲು
8. ಉಪ್ಪು- ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ:
Advertisement
* ಬಾಳೆಹಣ್ಣಿನ ಸಿಪ್ಪೆ ತೆಗೆದು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಿವುಚಿಕೊಳ್ಳಿ. ಅಥವಾ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ.
* ಬಾಳೆಹಣ್ಣನ್ನು ಪೇಸ್ಟ್ ಮಾಡಿಕೊಂಡ ಬಳಿಕ ಅದಕ್ಕೆ ಸಕ್ಕರೆ, ಜೀರಿಗೆ, ಸೋಡಾ, ಉಪ್ಪು, ಮೊಸರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಪೂರ್ತಿ ಕರಗಿದ ಬಳಿಕ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟು ರೆಡಿ ಮಾಡಿಕೊಳ್ಳಿ.
* ಕಲಸಿದ ಹಿಟ್ಟನ್ನು ಸುಮಾರು 8-10 ಗಂಟೆಗಳ ಕಾಲ ನೆನೆಯಲು ಬಿಡಿ.
* ನಂತರ ಒಲೆ ಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಬಳಿಕ ಒಂದು ಸಣ್ಣ ಲಿಂಬೆ ಹಣ್ಣು ಗಾತ್ರದ ಉಂಡೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಮೈದಾ ಪುಡಿ ಸೇರಿಸಿಕೊಂಡು ಸ್ವಲ್ಪ ದಪ್ಪ ಇರುವಂತೆಯೇ ಲಟ್ಟಿಸಿಕೊಳ್ಳಿ.
* ಇತ್ತ ಎಣ್ಣೆ ಕಾದ ಬಳಿಕ ಲಟ್ಟಿಸಿಕೊಂಡ ಬನ್ಸ್ ನ್ನು ಎಣ್ಣೆಗೆ ಬಿಡಿ. ಸ್ವಲ್ಪ ಹೊತ್ತಿನ ಬಳಿಕ ಬನ್ಸ್ ಉಬ್ಬುತ್ತದೆ. ನಂತರ ಕಂದು ಬಣ್ಣ ಬರುವವರೆಗೆ ಕರಿದು ತೆಗೆಯಿರಿ.
* ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಲು ಕೊಡಿ.