– ಟೀಸರ್ ಬಿಡುಗಡೆ ಸಮಾರಂಭಕ್ಕೆ 500 ರೂ. ಟಿಕೆಟ್!
ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಾಗಿ ನಟಿಸಿರೋ ಕಾರಣಕ್ಕೇ ಎಲ್ಲರ ಗಮನ ಸೆಳೆದಿದ್ದ ಚಿತ್ರ ದಿ ವಿಲನ್. ಆದರೆ ನಿರ್ದೇಶಕ ಪ್ರೇಮ್ ಅದೇಕೋ ಮಾಮೂಲಿನಂತೆ ಈ ಚಿತ್ರದ ಕೆಲಸ ಕಾರ್ಯಗಳನ್ನು ನಿಧಾನ ಮಾಡಿದ್ದರೂ ಆರಂಭಿಕ ಕ್ಯೂರಿಯಾಸಿಟಿಯನ್ನೇ ಕಾಯ್ದುಕೊಂಡಿರೋದು ಈ ಚಿತ್ರದ ವಿಶೇಷ!
ಯಾಕೆ ಇನ್ನೂ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ ಎಂಬಂಥಾ ಪ್ರಶ್ನೆಗಳ ಹೊರತಾಗಿ ಮತ್ಯಾವ ಸದ್ದೂ ಇರದಿದ್ದ ಈ ಚಿತ್ರದ ಕಡೆಯಿಂದ ಹೊಸಾ ಸುದ್ದಿಯೊಂದು ಹೊರ ಬಿದ್ದಿದೆ. ನಿರ್ದೇಶಕ ಪ್ರೇಮ್ ಅವರು ಇದೇ ತಿಂಗಳ 28ರಂದು ವಿಶೇಷವಾದೊಂದು ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
- Advertisement
ಪೋಸ್ಟರ್‍ಗಳಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರುಗಳ ನ್ಯೂ ಲುಕ್ ಅಭಿಮಾನಗಳನ್ನು ಸೆಳೆದುಕೊಂಡಿತ್ತು. ತಡವಾದರೂ ಏನೋ ಕಮಾಲ್ ಮಾಡೋ ಪ್ರೇಮ್ ಈಗ ಬಿಡುಗಡೆಯಾಗಲಿರೋ ಟೀಸರ್‍ನಲ್ಲಿಯೂ ಹೊಸತೇನನ್ನೋ ಇಟ್ಟಿರುತ್ತಾರೆಂಬ ವಿಶ್ವಾಸ ಪ್ರೇಕ್ಷಕರಲ್ಲಿ ಇದ್ದೇ ಇದೆ. ಈ ಟೀಸರ್ ಬಿಡುಗಡೆಯ ವಿಚಾರದಲ್ಲಿಯೂ ಪ್ರೇಮ್ ವಿಶೇಷವಾದೊಂದು ವಿಚಾರ ಜಾಹೀರು ಮಾಡಿದ್ದಾರೆ. ಮೊದಲ ಸಲ ಟೀಸರ್ ಬಿಡುಗಡೆ ಸಮಾರಂಭಕ್ಕೆ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಅದರ ಬೆಲೆ 500 ರೂಪಾಯಿಯಂತೆ. ಚಿತ್ರ ನಿರ್ದೇಶಕರಲ್ಲಿ ಅನೇಕರು ಸಂಕಷ್ಟದಲ್ಲಿರುತ್ತಾರಾದ್ದರಿಂದ ಈ ಟಿಕೇಟಿನ ಕಾಸನ್ನು ಅಂಥವರ ಕಷ್ಟಗಳಿಗೆ ಸಹಾಯವಾಗುವಂತೆ ವಿನಿಯೋಗಿಸಲು ಪ್ರೇಮ್ ನಿರ್ಧರಿಸಿದ್ದಾರೆ. ಈ ಟೀಸರ್ ಅನಾವರಣ ಕಾರ್ಯಕ್ರಮ ಜೂ.28ರಂದು ಸಂಜೆ 7 ಘಂಟೆಗೆ ಮಾಗಡಿ ರಸ್ತೆಯ ಜಿಟಿ ವಲ್ರ್ಡ್ ಮಾಲ್‍ನಲ್ಲಿ ನಡೆಯಲಿದೆ.
- Advertisement
ಇದೇ ಹೊತ್ತಿನಲ್ಲಿ ಬಾಕಿ ಉಳಿದಿರುವ ಚಿತ್ರೀಕರಣವನ್ನೂ ಕಂಪ್ಲೀಟು ಮಾಡಿಕೊಳ್ಳಲೂ ತಯಾರಿ ಆರಂಭಿಸಿದ್ದಾರಂತೆ. ಇದೇ ವೇಗದಲ್ಲಿ ಪ್ರೇಮ್ ಮುಂದುವರೆದರೆ ಇನ್ನು ಕೆಲ ದಿನಗಳಲ್ಲಿಯೇ ಈ ಚಿತ್ರ ತೆರೆ ಕಾಣುವ ದಿನಾಂಕವೂ ನಿಗದಿಯಾಗಬಹುದು.
Tickets available 9880718005. 9741026131. #thevillain. Love u all ???? pic.twitter.com/Yb70M8gKah
— PREM❣️S (@directorprems) June 24, 2018
The Villain teaser vl b launched on 28th, 7pm@GT World mall ,Tickets r available now, Every single rupee of ur contribution vl b given to the directors who r in medical emergency&financial crisis,Sri HD Kumar Swamy Hnbl C.M will b present along with specially invited celebrities. pic.twitter.com/ixogF2CvuN
— PREM❣️S (@directorprems) June 23, 2018