ಬೆಂಗಳೂರು: ಇವತ್ತು ಡಬಲ್ ಧಮಾಕಾ. ಒಂದೆಡೆ ದಸರಾ ಸಂಭ್ರಮ. ಇನ್ನೊಂದೆಡೆ ದಿ ವಿಲನ್ ರಿಲೀಸ್ ಸಡಗರ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಿರುವ ‘ದಿ ವಿಲನ್’ ಸಿನಿಮಾ ರಿಲೀಸ್ ಆಗಿದೆ.
ಬಳ್ಳಾರಿಯ ಥಿಯೇಟರ್‍ಗಳಲ್ಲಿ ಬೆಳಗ್ಗೆ 5 ಗಂಟೆಗೆ ಮೊದಲ ಶೋ ಶುರುವಾಗಿದೆ. ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಮಂಡ್ಯ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ವಿಲನ್ ಫಸ್ಟ್ ಶೋ ಶುರುವಾಗಿದೆ. ಹಲವೆಡೆ ಇದೀಗ ಶೋ ಆರಂಭವಾಗಲಿದೆ. ಎಲ್ಲಾ ಥಿಯೇಟರ್‍ಗಳ ಮುಂದೆ ದಿ ವಿಲನ್ ನೋಡಲು ನಸುಕಿನ ಜಾವವೇ ಮುಗಿಬಿದ್ದಿದ್ದಾರೆ. ರಾತ್ರಿಯಿಂದಲೇ ಟಿಕೆಟ್‍ಗೆ ಕಾದು ಕುಳಿತಿದ್ದ ಶಿವಣ್ಣ, ಕಿಚ್ಚನ ವೀರಾಭಿಮಾನಿಗಳು, ಇದೀಗ ಸಿನಿಮಾ ಹಾಲ್ ಪ್ರವೇಶ ಮಾಡಿದ್ದಾರೆ.
Advertisement
Advertisement
ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ನಲ್ಲಿ ಮೂರು ದಿನಗಳ ಟಿಕೇಟ್ ಗಳು ಈಗಾಗಲೇ ಆನ್ ಲೈನ್ ನಲ್ಲಿ ಬುಕ್ ಆಗಿವೆ. ಮಧ್ಯರಾತ್ರಿಯೇ ಲಕ್ಷ್ಮಿ ಟಾಕೀಸ್ ಬಳಿ ಡೊಳ್ಳು, ತಮಟೆ ತರಿಸಿ ಅಭಿಮಾನಿಗಳು ಡ್ಯಾನ್ಸ್ ಮಾಡಿದರು. ಕುಂಬಳ ಕಾಯಿ ಒಡೆದು, ಕಟೌಟ್ ಮುಂದೆ ಕರ್ಪೂರ ಹಚ್ಚಿ ಸಂಭ್ರಮಿಸಿದರು. ಗಲಾಟೆ ಆಗಬಹುದು ಎನ್ನುವ ಕಾರಣಕ್ಕೆ ಮಿಡ್‍ನೈಟ್ ಶೋಗೆ ಪೊಲೀಸ್ ಇಲಾಖೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಸಾವಿರಾರು ಅಭಿಮಾನಿಗಳಿಗೆ ಭಾರೀ ನಿರಾಸೆ ಆಯ್ತು. ಪೊಲೀಸ್ ಮತ್ತು ಜಿಲ್ಲಾಡಳಿತದ ಅನುಮತಿ ಪಡೆಯದೇ ಲಕ್ಷ್ಮೀ ಟಾಕೀಸ್ ಮಾಲೀಕರು ಟಿಕೆಟ್ ಮಾರಾಟ ಮಾಡಿದ್ದರು.
Advertisement
ಎಲ್ಲೆಡೆ ಟಿಕೆಟ್‍ಗೆ ನೂಕುನುಗ್ಗಲು ಕಂಡು ಬರುತ್ತಿದೆ. ಮಲ್ಟಿಪ್ಲೆಕ್ಸ್ ಗಳು ಹೌಸ್‍ಫುಲ್ ಆಗಿವೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv