ಯಶ್ ನಟಿಸಿ ನಿರ್ಮಿಸುತ್ತಿರುವ ಟಾಕ್ಸಿಕ್ (Toxic) ಚಿತ್ರದ ಬಹುಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿಯೇ (Bengaluru) ನಡೆಯುತ್ತಿದೆ. ಚಿತ್ರದಲ್ಲಿ ತೊಡಗಿರುವ ಬಹುಭಾಷಾ ಕಲಾವಿದರು ಹಾಗೂ ತಂತ್ರಜ್ಞರನ್ನು ಯಶ್ (Yash) ಬೆಂಗಳೂರಿಗೆ ಕರೆಸಿ ಚಿತ್ರೀಕರಣ ಮಾಡಿದ್ದಾರೆ. ಆಗಾಗ ಮುಂಬೈಗೂ (Mumbai) ಶಿಫ್ಟ್ ಆಗುತ್ತಾರೆ. ಆದರೂ ಬೆಂಗಳೂರಿನ ಹೆಚ್‌ಎಂಟಿಯಲ್ಲಿ ಹಾಕಲಾದ ಬೃಹತ್ ಸೆಟ್‌ನಲ್ಲಿ ಆಗಾಗ ಚಿತ್ರೀಕರಣ ನಡೆಯುತ್ತದೆ. ಆದರೆ ಚಿತ್ರದ ನಾಯಕಿಯಾಗಿ ಯಶ್ ಬೆಂಗಳೂರಿನಲ್ಲಿ ಮಾಡಲು ಪ್ಲ್ಯಾನ್ ಆಗಿದ್ದ ಚಿತ್ರೀಕರಣವನ್ನು ಮುಂಬೈಗೆ ಶಿಫ್ಟ್ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾನಿಗಾಗಿ ಯಶ್ ಲೊಕೇಶನ್ ಶಿಫ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗ್ಲೇ ಕಿಯಾರಾ ಅಡ್ವಾನಿ (Kiara Advani) ಭಾಗದ ಬಹುಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ಹಾಕಲಾದ ಸೆಟ್‌ನಲ್ಲಿಯೇ ಪೂರ್ಣಗೊಂಡಿದೆ. ಇದೀಗ ಬಾಕಿ ಇರುವ ಕೆಲವು ದೃಶ್ಯಗಳು ಹಾಗೂ ಪ್ಯಾಚ್‌ವರ್ಕ್ ದೃಶ್ಯಕ್ಕಾಗಿ ಅವರನ್ನ ಮುಂಬೈನಿಂದ ಬೆಂಗಳೂರಿಗೆ ಕರೆಸುವ ಬದಲು ಮುಂಬೈನಲ್ಲೇ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಇಷ್ಟೊಂದು ಶ್ರಮ ತೆಗೆದುಕೊಂಡು ಚಿತ್ರತಂಡ ಚಿತ್ರೀಕರಣ ಮಾಡ್ತಿರೋದಕ್ಕೆ ಕಾರಣ ಕಿಯಾರಾ ಅಡ್ವಾನಿ ಈಗ ಗರ್ಭಿಣಿ. ಇದನ್ನೂ ಓದಿ: ಏನಿಲ್ಲ ಏನಿಲ್ಲ ಅನ್ನುತ್ತಲೇ ಒಂದೇ ಕಾರ್‌ನಲ್ಲಿ ಹೊರಟ ರಶ್ಮಿಕಾ, ದೇವರಕೊಂಡ
ನಟಿ ಕಿಯಾರಾ ಅಡ್ವಾನಿ ಈಗ ಗರ್ಭಿಣಿಯಾಗಿದ್ದು ಅವರಿಗೆ ಈಗ ಪ್ರಯಾಣ ಮಾಡುವುದು ಕಷ್ಟದ ಕೆಲಸ. ಹೀಗಾಗಿ ಈ ನಾಯಕಿಗಾಗಿ `ಟಾಕ್ಸಿಕ್’ ಚಿತ್ರತಂಡ ಅವರಿರುವ ಜಾಗಕ್ಕೆ ಹೋಗಿ ಶೂಟಿಂಗ್ ಮಾಡಲು ತಯಾರಿ ಮಾಡಿಕೊಂಡಿದೆ. ಅಸಲಿಗೆ ಕಿಯಾರಾ ಭಾಗದ ಟಾಕ್ಸಿಕ್ ಚಿತ್ರೀಕರಣ ಮುಗಿದಿತ್ತು ಎನ್ನಲಾಗಿತ್ತು. ಆದರೆ ಸಿನಿಮಾ ಮುಗಿಯೋವರೆಗೂ ಕೆಲವೊಂದು ಬದಲಾವಣೆಗಳು, ದೃಶ್ಯಗಳನ್ನು ಸೇರಿಕೊಳ್ಳುವ ಪ್ರಕ್ರಿಯೆ ಸಾಮಾನ್ಯವಾಗಿದ್ದು ಈ ಚಿತ್ರೀಕರಣಕ್ಕಾಗಿ ಕಿಯಾರಾ ಡೇಟ್ ಅವಶ್ಯಕವಾಗಿತ್ತು. ಹೀಗಾಗಿ ಕಿಯಾರಾ ಭಾಗದ ಕೆಲ ದಿನಗಳ ಚಿತ್ರೀಕರಣವನ್ನ ಮುಂಬೈನಲ್ಲೇ ಮಾಡಲು ತಯಾರಿ ಮಾಡಲಾಗಿದೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ
ಟಾಕ್ಸಿಕ್ ಚಿತ್ರವನ್ನು ಯಶ್ ಕೆವಿಎನ್ (KVN) ಫಿಲಂಸ್ ಜೊತೆಗೂಡಿ ತಮ್ಮ ಸ್ವಂತ ಬ್ಯಾನರ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್‌ನ ಮೂಲಕ ನಿರ್ಮಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ನಿರ್ದೇಶಕಿ. 2026ರ ಮಾರ್ಚ್ 19ಕ್ಕೆ ಚಿತ್ರ ರಿಲೀಸ್ ಘೋಷಣೆಯಾಗಿದೆ. ಚಿತ್ರದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ, ತಾರಾ ಸುತಾರಿಯಾ ಮುಂತಾದವರು ಅಭಿನಯಿಸುತ್ತಿದ್ದಾರೆ.