ಸ್ಯಾಂಡಲ್‍ವುಡ್‍ನಲ್ಲಿ ಭಿನ್ನ, ವಿಭಿನ್ನ ಪ್ರಯತ್ನಗಳು ನಡೆಯುತ್ತನೆ ಇರುತ್ತೆ. ಹಲವಾರು ಪ್ರತಿಭಾವಂತ ನಿರ್ದೇಶಕರು ಹೊಸತನದೊಂದಿಗೆ ಪ್ರಯೋಗಗಳನ್ನು ಮಾಡ್ತಾನೆ ಇರ್ತಾರೆ. ಆದ್ರೆ ಎಲ್ಲಾ ಪ್ರಯತ್ನಗಳನ್ನು ಪ್ರೇಕ್ಷಕ ಒಪ್ಪಿದ್ರೆ ಮಾತ್ರ ಗೆಲುವು ಸಿಗೋದು. ಆ ರೀತಿಯ ವಿಭಿನ್ನ ಪ್ರಯತ್ನದಲ್ಲಿ ಆರಂಭದಲ್ಲೇ ಗೆದ್ದ ಚಿತ್ರ ‘ಕೊಡೆಮುರುಗ’.
Advertisement
ಸೋಶಿಯಲ್ ಮೀಡಿಯಾದಲ್ಲಿ ಈ ‘ಕೊಡೆಮುರುಗ’ನ ಹವಾ ಜೋರಾಗಿದೆ. ಈಗಾಗಲೇ ಕೈಲಾಶ್ ಖೇರ್ ಹಾಡಿರುವ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ಲಿರಿಕಲ್ ಸಾಂಗ್ ವಿಡಿಯೋ ಯುಟ್ಯೂಬ್‍ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದು, ಟ್ರೈಲರ್ ಕೂಡ ಸೂಪರ್ ಹಿಟ್ ಆಗಿದೆ. ಈ ಚಿತ್ರದ ವೆರಿ ಇಂಟ್ರಸ್ಟಿಂಗ್ ಸಂಗತಿಯೊಂದಿದೆ. ಅದೇನಪ್ಪಾ ಅಂದ್ರೆ, ಎಲ್ರೂ ತಮ್ಮ ಸಿನಿಮಾ ನಾಯಕನ ಹೆಸ್ರನ್ನು ಟೈಟಲ್ ಆಗಿ ಇಟ್ರೆ ಈ ಚಿತ್ರತಂಡ ಮಾತ್ರ ಚಿತ್ರದ ಖಳನಟನ ಹೆಸ್ರನ್ನೆ ಟೈಟಲ್ ಆಗಿ ಇಟ್ಟಿರೋದು ಕೊಡೆಮುರುಗ ಚಿತ್ರದ ಸ್ಪೆಷಾಲಿಟಿ.
Advertisement
‘ಕೊಡೆಮುರುಗ’ ಚಿತ್ರಕ್ಕೆ ಸುಬ್ರಮಣ್ಯ ಪ್ರಸಾಧ್ ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ಸಾಕಷ್ಟು ಅನುಭವ ಇರುವ ಇವ್ರಿಗೆ ಇದು ಮೊದಲನೇ ಸಿನಿಮಾ. ಮಾಮೂಲಾಗಿ ಸಿನಿಮಾ ಶೂಟಿಂಗ್ ಆದ್ಮೇಲೆ ಟ್ರೈಲರ್ ರಿಲೀಸ್ ಮಾಡೋ ನಿರ್ದೇಶಕರನ್ನ ನೋಡಿರ್ತೀವಿ ಆದ್ರೆ ಸುಬ್ರಮಣ್ಯ ಪ್ರಸಾಧ್ ಮಾತ್ರ ಮೊದ್ಲು ಟ್ರೈಲರ್ ರಿಲೀಸ್ ಮಾಡಿ ಆಮೇಲೆ ಚಿತ್ರ ನಿರ್ದೇಶನ ಮಾಡಿ ಅಚ್ಚರಿ ಮೂಡಿಸಿದ್ರು.
Advertisement
Advertisement
ಅಗ್ನಿ ಸಾಕ್ಷಿ ಧಾರವಾಹಿಯಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಮುರುಗ ಅಲಿಯಾಸ್ ಮುನಿಕೃಷ್ಣ ಹಾಗೂ ಚಿತ್ರದ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮುನಿಕೃಷ್ಣ ಚಿತ್ರದಲ್ಲಿ ಖಳನಟನಾಗಿ ಸಮಾಜದ ಕೆಟ್ಟ ಮುಖಗಳನ್ನು ಪ್ರತಿನಿಧಿಸುವ ಕೊಡೆಮುರುಗ ಪಾತ್ರದಲ್ಲಿ ಬಣ್ಣಹಚ್ಚಿದ್ರೆ, ನಿರ್ದೇಶಕ ಸುಬ್ರಮಣ್ಯ ಪ್ರಸಾಧ್ ಸಮಾಜದಲ್ಲಿರುವ ಪಾಸಿಟಿವ್ ವ್ಯಕ್ತಿಗಳ ಪಾತ್ರವನ್ನು ಚಿತ್ರದಲ್ಲಿ ನಿಭಾಯಿಸಿದ್ದಾರೆ. ಇನ್ನು ನಾಯಕಿಯಾಗಿ ಪಲ್ಲವಿ ಗೌಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಹೀರೋ, ಹೀರೋಯಿಸಂ ಇದ್ಯಾವುದು ಇಲ್ಲದೆ ಕಥೆಯೇ ಹೀರೋ ಆಗಿರೋ ಕೊಡೆಮುರುಗ ಚಿತ್ರ ಕೆ.ಆರ್.ಕೆ ಬ್ಯಾನರ್ ನಡಿ ನಿರ್ಮಾಣವಾಗಿದೆ. ಮಮ್ಮಿ ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ಬಂಡವಾಳ ಹೂಡಿದ್ದಾರೆ. ಭರಪೂರ ಮನೋರಂಜನೆ ಜೊತೆ ಒಂದೊಳ್ಳೆ ಮೆಸೇಜ್ ಕೊಡೋಕೆ ಸಜ್ಜಾಗಿರೋ ಈ ಚಿತ್ರ ಮಾರ್ಚ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.