– ಬಾಹುಬಲಿಯನ್ನ ಮೀರಿಸುತ್ತಿದೆಯಂತೆ ಕೆಜಿಎಫ್ ಮೇಕಿಂಗ್!
– ಚಿತ್ರ ಮೂಡಿಬಂದ ಮೇಕಿಂಗ್ ವಿಡಿಯೋ ನೋಡಿದ್ರೆ ರೋಮಾಂಚನ ಆಗೋದು ಖಚಿತ
ಬೆಂಗಳೂರು: ಇದೂವರೆಗೂ ಕೆಜಿಎಫ್ ಸಿನಿಮಾದ ಹಾಡುಗಳು, ಟೀಸರ್ ಮತ್ತು ಟ್ರೇಲರ್ ವಿಡಿಯೋ ನೋಡಿದ ರಾಕಿಂಗ್ ಅಭಿಮಾನಿಳು ಫುಲ್ ಜೋಶ್ ನಲ್ಲಿದ್ದಾರೆ. ಈ ಮೊದಲು ಟೀಸರ್ ಜೊತೆಯಲ್ಲಿಯೇ ಮೇಕಿಂಗ್ ದೃಶ್ಯದ ಕೆಲ ತುಣುಕುಗಳನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದೆಲ್ಲದರ ನಡುವೆ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದೀಗ ಚಿತ್ರತಂಡವೇ ಸಿನಿಮಾ ಸೆಟ್ ನಿರ್ಮಾಣದ ದೃಶ್ಯಗಳನ್ನು ಬಿಡುಗಡೆಗೊಳಿಸಿದೆ.
ವಿಡಿಯೋ ಆರಂಭದಲ್ಲಿ ಯಶ್ ಚಿತ್ರದ ಬಗ್ಗೆ ಮಾತನಾಡಿದ್ದು, ಕೆಜಿಎಫ್ ಕೇವಲ ಯಶ್ ಸಿನಿಮಾ ಅಲ್ಲ ಅನ್ನುತ್ತಲೇ ತಮ್ಮ ಮಾತುಗಳನ್ನು ಅರಂಭಿಸಿದ್ದಾರೆ. ಯಶ್ ಚಿತ್ರೀಕರಣ ಹೇಗೆ ನಡೆಯಿತು? ಯಾವ ಕಲಾವಿದರು ಮತ್ತು ತಂತ್ರಜ್ಞರು ಮಾಡಿದ ಪರಿಶ್ರಮವನ್ನು ಎಲ್ಲವನ್ನು ಬಹಿರಂಗಗೊಳಿಸಿದ್ದಾರೆ. ತೆರೆಯ ಮೇಲೆ ನಾನೊಬ್ಬ ಸಿನಿಮಾವನ್ನು ಪ್ರತಿನಿಧಿಸಬಹುದು. ಆದ್ರೆ ತೆರೆಯ ಹಿಂದೆ ಹಲವರ ಶ್ರಮ ಅಡಗಿದೆ ಎಂಬುದನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆಯ ಮುನ್ನವೇ ಮತ್ತೊಂದು ದಾಖಲೆ ಬರೆದ ಕೆಜಿಎಫ್
Advertisement
Advertisement
ಮೇಕಿಂಗ್ ವಿಡಿಯೋ ನೋಡಿದ ನೆಟ್ಟಿಗರು ಇದು ಬಾಹುಬಲಿಯ ಮೇಕಿಂಗ್ ನ್ನು ಮೀರಿಸುವಂತೆ ಕಾಣುತ್ತಿದೆ ಎಂದು ಕಮೆಂಟ್ ಮಾಡ್ತಿದ್ದಾರೆ. ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಿ ಬಾಹುಬಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಇದನ್ನೂ ಓದಿ: ದಾಖಲೆ ನಿರ್ಮಿಸಿದ ಕೆಜಿಎಫ್ ಗಲಿ ಗಲಿ ಹಾಡು- ಈಗ ಕನ್ನಡದ ಜೋಕೆ ಹಾಡು ರಿಲೀಸ್
Advertisement
ಬಾಹುಬಲಿಯ ಗುಣಮಟ್ಟದ ತಂತ್ರಜ್ಞಾನ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕನ್ನಡದ ಕೆಜಿಎಫ್ ಮೊದಲಿನಿಂದಲೂ ಹೇಳಿಕೊಂಡು ಬಂದಂತೆ ವಿಭಿನ್ನವಾದ ಚಿತ್ರ. ಚಿತ್ರಕ್ಕಾಗಿ ಕೋಲಾರದ ಕೆಜಿಎಫ್ ಹೊರವಲಯದಲ್ಲಿ ಗಣಿ ನಿಕ್ಷೇಪವನ್ನು ಮರು ಸೃಷ್ಟಿ ಮಾಡಲಾಗಿದೆ. 1970ರ ಕಾಲಘಟ್ಟದ ಕಥೆಯುಳ್ಳ ಸಿನಿಮಾ ಅಗಿದ್ದರಿಂದ ಚಿತ್ರತಂಡ ಪ್ರತಿಯೊಂದು ವಸ್ತುಗಳನ್ನು ಅತ್ಯಂತ ಸೂಕ್ಷ್ಮವಾಗಿ ಅಳವಡಿಸಿಕೊಂಡಿರೋದನ್ನು ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಯಶ್ ಮಾಡಿದ್ದ ಸಹಾಯಕ್ಕೆ ಕೆಜಿಎಫ್ ಬೆನ್ನಿಗೆ ನಿಂತ ನಟ ವಿಶಾಲ್!
Advertisement
ಕೆಜಿಎಫ್ ನಲ್ಲಿ ನಿರ್ಮಿಸಿದ್ದ ಸೆಟ್ ನಲ್ಲಿ ಮಳೆಗಾಲದಲ್ಲಿಯೇ ಚಿತ್ರೀಕರಣ ನಡೆದಿತ್ತು. ಅಲ್ಲಿಯ ಭೌಗೋಳಿಕ ಸನ್ನಿವೇಶಕ್ಕನುಗುಣವಾಗಿ ಶೂಟಿಂಗ್ ನಡೆದಿತ್ತು. ಚಿತ್ರೀಕರಣದ ಮಧ್ಯೆ ಮಳೆ ಗಾಳಿ ಕೆಜಿಎಫ್ ಸೆಟ್ ಹಾನಿಗೆ ಒಳಗಾಗಿತ್ತು. ಎಲ್ಲ ಅಡೆತಡೆಗಳ ನಡುವೆಯ ಕೆಜಿಎಫ್ ಸಿನಿಮಾದ ಮೊದಲ ಭಾಗ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಶುಕ್ರವಾರ (ಡಿಸೆಂಬರ್ 21) ದೇಶಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದೆ. ಕೆಜಿಎಫ್ ಚಿತ್ರದ ಹಾಡುಗಳು, ಟ್ರೇಲರ್ ಮತ್ತು ಟೀಸರ್ ಲಹರಿ ಮ್ಯೂಸಿಕ್ ಯು ಟ್ಯೂಬ್ ಖಾತೆಯಲ್ಲಿ ನೋಡಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv