ಕನ್ನಡದ ನಟಿ ಶ್ರೀಲೀಲಾ ಇತ್ತೀಚೆಗೆ ನಟಿಸಿದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಹೀಗಿದ್ದರೂ ಶ್ರೀಲೀಲಾಗೆ ಬೇಡಿಕೆ ಕಮ್ಮಿಯಾಗಿಲ್ಲ. ಸದ್ಯ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಚಿತ್ರದಲ್ಲಿ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು, ಬಿಗ್ ಆಫರ್ ಅನ್ನೇ ಕನ್ನಡದ ನಟಿ ನೋ ಎಂದಿದ್ದಾರೆ. ಇದನ್ನೂ ಓದಿ:2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ
‘ಪುಷ್ಪ’ ಪಾರ್ಟ್ 1 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ಫುಲ್ ಎಂದೆನಿಸಿಕೊಂಡಿರುವ ಸಿನಿಮಾ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅದ್ಭುತ ಅಭಿನಯಕ್ಕೆ ಅಭಿಮಾನಿಗಳು ವಾವ್ ಎಂದಿದ್ದರು. ‘ಪುಷ್ಪ’ ಪಾರ್ಟ್ 2 ಕೂಡ ಉತ್ತಮ ಕಥೆಯ ಜೊತೆ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲು ಅರ್ಜುನ್ ಜೊತೆ ಕಾಣಿಸಿಕೊಳ್ಳುವ ಅವಕಾಶ ಸಿಗಲಿ ಎಂದು ಪರಿತಪಿಸುವ ನಟಿಯರ ಮಧ್ಯೆ ಶ್ರೀಲೀಲಾ ಸಿಕ್ಕ ಆಫರ್ ಕೈಬಿಟ್ಟಿರೋದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
Advertisement
‘ಪುಷ್ಪ’ ಪಾರ್ಟ್ 1ರಲ್ಲಿ ಸಮಂತಾ (Samantha) ಸೊಂಟ ಬಳುಕಿಸಿದ್ದು, ಚಿತ್ರಕ್ಕೆ ಪ್ಲಸ್ ಆಗಿತ್ತು. ಹಾಗಾಗಿ ಭಾಗ 2ರಲ್ಲಿ ಅದೇ ರೀತಿಯ ಐಟಂ ಸಾಂಗ್ ಇಡಲು ಡೈರೆಕ್ಟರ್ ಯೋಚಿಸಿದ್ದು, ಶ್ರೀಲೀಲಾಗೆ ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕುವ ಆಫರ್ ನೀಡಿದ್ದರು. ನಾಯಕಿಯಾಗಿ ಬೇಡಿಕೆ ಇರುವ ಶ್ರೀಲೀಲಾ ಐಟಂ ಡ್ಯಾನ್ಸ್ ಮಾಡಿದ್ರೆ ಎಲ್ಲಿ ತನ್ನ ಕೆರಿಯರ್ಗೆ ಹೊಡೆತ ಬೀಳಬಹುದು ಎಂಬ ಕಾರಣಕ್ಕೆ ಒಲ್ಲೆ ಎಂದಿದ್ದಾರೆ.
Advertisement
Advertisement
ಶ್ರೀಲೀಲಾ (Sreeleela) ಅದ್ಭುತ ಡ್ಯಾನ್ಸ್, ನೋಡಲು ಕೂಡ ಸ್ಟೈಲೀಶ್ ಆಗಿದ್ದಾರೆ. ಹಾಗಾಗಿ ಅವರೇ ಸೂಕ್ತ ಎನಿಸಿ ಸುಕುಮಾರ್ ಸಿನಿಮಾ ಆಫರ್ ಕೊಟ್ಟಿದ್ರು. ಶ್ರೀಲೀಲಾ ಅಲ್ಲು ಅರ್ಜುನ್ ಚಿತ್ರಕ್ಕೆ ನೋ ಎಂದಿರೋದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.
Advertisement