ಶ್ರೀಲೀಲಾ (Sreeleela) ಸದ್ದು ಮಾಡುತ್ತಿಲ್ಲ. ಕಳೆದ ವರ್ಷ ಬರೋಬ್ಬರಿ 4 ಫ್ಲಾಪ್ ಸಿನಿಮಾ ಕೊಟ್ಟು ಅನಾಮತ್ತು ಹುಡುಗರ ನಿದ್ದೆ ಕೆಡಿಸಿದ್ದ ಶ್ರೀಲೀಲಾ ಈಗ ಸೈಲೆಂಟ್ ಆಗಿದ್ದಾರೆ. ಹೀಗಿದ್ದರೂ ಶ್ರೀಲೀಲಾ ಕೋಟಿ ಕೋಟಿ ಕಾಸು ಪಡೆಯುತ್ತಿದ್ದಾರೆ. ಹಾಗಿದ್ದರೆ ಕಿಸ್ ಬೆಡಗಿ ಈ ವರ್ಷದ ಹಣೆ ಬರಹ ಏನು? ಎಷ್ಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ? ಇಲ್ಲಿದೆ ಮಾಹಿತಿ.
ರವಿತೇಜಾ ಜೊತೆ ‘ಧಮಾಕಾ’ (Dhamaka) ಸೂಪರ್ ಹಿಟ್ ಆಗಿದ್ದೇ ತಡ, ಶ್ರೀಲೀಲಾ ಮುಟ್ಟಿದ್ದೆಲ್ಲ ಚಿನ್ನವಾಯಿತು. ಕಾರಣ ಅಷ್ಟೊಂದು ಕಿಕ್ ಕೊಟ್ಟಿದ್ದರು ಇವರು. ಆದರೆ ಅದಾದ ಮೇಲೆ 4 ಸಿನಿಮಾ ರಿಲೀಸ್ ಆದವು. ಅದರಲ್ಲಿ ಬಾಲಕೃಷ್ಣ ಜೊತೆಗಿನ ‘ಭಗವಂತ ಕೇಸರಿ’ ಹಿಟ್ ಆಯಿತು. ಆದರೆ ಅದರ ಕ್ರೆಡಿಟ್ ಸಿಕ್ಕಿದ್ದು ಬಾಲಯ್ಯನಿಗೆ ಶ್ರೀಲೀಲಾ ಮುಡಿಗಲ್ಲ. ಸಂಕ್ರಾಂತಿಗೆ ಬಂದಿದ್ದು ‘ಗುಂಟೂರೂ ಖಾರಂ’ ಸಿನಿಮಾ. ಹಂಗೂ ಹಿಂಗೂ ನೂರು ಕೋಟಿ ಮಾಡಿತು. ಈ ಸಿನಿಮಾದ ಸಕ್ಸಸ್ ಕೂಡ ಮಹೇಶ್ ಬಾಬು (Mahesh Babu) ಪಾಲಿಗೆ ಸೇರಿತು. ಹೀಗಾಗಿ ಶ್ರೀಲೀಲಾ ಹೊಸ ಚಿತ್ರ ಒಪ್ಪಿಕೊಳ್ಳುತ್ತಿಲ್ಲ. ಇದನ್ನೂ ಓದಿ:ಅಬುದಾಬಿಯಲ್ಲಿ ಮೊಳಗಿತು ‘ಕರಟಕ ದಮನಕ’ ಸಾಂಗ್
ರಶ್ಮಿಕಾ (Rashmika Mandanna) ಬಾಲಿವುಡ್‌ನಲ್ಲಿ (Bollywood) ಮೆರೆಯುತ್ತಿದ್ದಾರೆ. ಟಾಲಿವುಡ್ ಅಂಗಳ ಖಾಲಿ ಖಾಲಿ. ಆ ಜಾಗವನ್ನು ತುಂಬಬೇಕಿದ್ದ ಶ್ರೀಲೀಲಾ ತಣ್ಣಗಾಗಿದ್ದಾರೆ. ಸೋಲು ಅವರನ್ನು ದಿಕ್ಕೆಡಿಸಿದೆ. ಹೀಗಿದ್ದರೂ ಸಂಭಾವನೆ ಕಮ್ಮಿ ಆಯಿತಾ? ನೋ ಚಾನ್ಸ್. ಆದ್ರೂ 3ರಿಂದ 4 ಕೋಟಿ ರೂ. ಶ್ರೀಲೀಲಾ ಪಡೆಯುತ್ತಾರೆ. ಇವರಿಗೆ ಸಮನಾದ ಇನ್ನೊಂದು ಹುಡುಗಿ ಇಲ್ಲ. ಶ್ರೀಲೀಲಾ ಕೇಳಿದಷ್ಟು ಕೊಡದೇ ನಿರ್ಮಾಪಕರಿಗೆ ಬೇರೆ ದಾರಿ ಇಲ್ಲ. ಪರಿಣಾಮ ಶ್ರೀಲೀಲಾ ರಾಕಿಂಗ್ ಅಂಡ್ ಡಾನ್ಸಿಂಗ್. ಮತ್ತೊಬ್ಬ ನಟಿ ಟಾಲಿವುಡ್‌ಗೆ ಎಂಟ್ರಿ ಆಗಬೇಕು. ಆಕೆ ಹಿಟ್ ಕೊಡಬೇಕು. ಆಗ ಮಾತ್ರ ಶ್ರೀಲೀಲಾ ಸೀಟು ಖಾಲಿ.
ಇತ್ತೀಚೆಗೆ ನಟಿಸಿದ ಸಿನಿಮಾಗಳ ಸಕ್ಸಸ್ ಕ್ರೆಡಿಟ್ ಶ್ರೀಲೀಲಾ ಪಾಲಿಗೆ ಇಲ್ಲದೇ ಇದ್ರೂ. ಕನ್ನಡದ ಬ್ಯೂಟಿಗಿರುವ ಡಿಮ್ಯಾಂಡ್ ಕೊಂಚವು ಕಮ್ಮಿಯಾಗಿಲ್ಲ.