ಕನ್ನಡದ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ತೆಲುಗಿನ ಬಿಗ್ ಬಾಸ್ ಸೀಸನ್ 7ರಲ್ಲಿ ಸಮರ್ಥ ಸ್ಪರ್ಧಿಯಾಗಿ ಮಿಂಚ್ತಿದ್ದಾರೆ. ಇದೀಗ ‘ಬಿಗ್ ಬಾಸ್’ (Bigg Boss) ವೇದಿಕೆಯಲ್ಲಿ ಪ್ರೀತಿಸಿದ ಹುಡುಗನ ಬಗ್ಗೆ ಶೋಭಾ ಬಾಯ್ಬಿಟ್ಟಿದ್ದಾರೆ.
ವಾರಾಂತ್ಯದ ನಾಗಾರ್ಜುನ ಅಕ್ಕಿನೇನಿ ಅವರ ಪಂಚಾಯತಿಯಲ್ಲಿ ಶೋಭಾ ಶೆಟ್ಟಿ ತಾವು ಎಂಗೇಜ್ ಆಗಿರುವ ಹುಡುಗನ ಬಗ್ಗೆ ರಿವೀಲ್ ಮಾಡಿದ್ದಾರೆ. ಯಶವಂತ್ ರೆಡ್ಡಿ ಜೊತೆ ಕಳೆದ ಮೂರುವರೆ ವರ್ಷಗಳಿಂದ ಪ್ರೀತಿಸುತ್ತಿರೋದಾಗ ನಾಗಾರ್ಜುನ ಬಳಿ ಹೇಳಿಕೊಂಡಿದ್ದಾರೆ.
ಶೋಭಾ ತಂದೆ ಮತ್ತು ಬಾಯ್‌ಫ್ರೆಂಡ್ ಯಶವಂತ್ ಕೂಡ ಎಂಟ್ರಿ ಕೊಟ್ಟು ಶೋಭಾಗೆ ಅಚ್ಚರಿ ಮೂಡಿಸಿದ್ದಾರೆ. ಇಬ್ಬರನ್ನೂ ನೋಡ್ತಿದ್ದಂತೆ ನಟಿ ಭಾವುಕರಾಗಿದ್ದಾರೆ. ಬಳಿಕ ಯಶವಂತ್‌ಗೆ ಮೊದಲು ಪ್ರಪೋಸ್ ಮಾಡಿದ್ದೇ ನಾನು ಎಂದು ಶೋಭಾ ಹೇಳಿದ್ದಾರೆ. ನಿರೂಪಕ ನಾಗಾರ್ಜುನ ಕೂಡ ಹೊಸ ಜೋಡಿಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ:‘ಟೈಗರ್ 3’ ಸಿನಿಮಾದ ಫಸ್ಟ್ ಡೇ ಕಲೆಕ್ಷನ್: ದಾಖಲೆ ಪುಡಿಪುಡಿ

ತೆಲುಗು ಬಿಗ್ ಬಾಸ್‌ನಲ್ಲಿ(Bigg Boss Telagu 7) ಖಡಕ್ ಸ್ಪರ್ಧಿಯಾಗಿರೋ ಶೋಭಾ ಆಟ ನೋಡಿ ನಮ್ಮ ಕನ್ನಡದ ಹುಡುಗಿ ಕನ್ನಡದ ‘ಬಿಗ್ ಬಾಸ್’ನಲ್ಲಿರಬೇಕಿತ್ತು ಎಂದು ಸಖತ್ ಟ್ರೋಲ್ ಕೂಡ ಮಾಡಿದ್ದಾರೆ.



