ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣ ದಿನದಿಂದ ದಿನಕ್ಕೆ ಹೊಸ ವಿಚಾರಗಳು ಬಯಲಾಗುತ್ತಿದೆ. ಹಲವು ತಿರುವುಗಳನ್ನು ಪಡೆದುಕೊಳ್ತಿದೆ. ಹೀಗಿರುವಾಗ ನಟಿ ರಾಗಿಣಿ (Ragini Dwivedi) ಅವರಿಗೂ ರೇಣುಕಾಸ್ವಾಮಿ ಮೆಸೇಜ್ ಕಳುಹಿಸಿದ್ದ ಎಂಬ ವಿಚಾರ ಜಾರ್ಜ್‌ಶೀಟ್ ಉಲ್ಲೇಖವಾಗಿತ್ತು. ಇದಕ್ಕೆ ರಾಗಿಣಿ ಪ್ರತಿಕ್ರಿಯಿಸಿ, ಅಶ್ಲೀಲ ಸಂದೇಶಗಳು ನನಗೆ ಬಂದಿರುವ ಮಾಹಿತಿ ಇಲ್ಲ ಎಂದಿದ್ದಾರೆ.
ನನ್ನ ಪ್ರೊಫೈಲ್ ಅನ್ನು ಏಜೆನ್ಸಿ ಹ್ಯಾಂಡಲ್ ಮಾಡುತ್ತದೆ. ಹೀಗಾಗಿ ಅಶ್ಲೀಲ ಸಂದೇಶಗಳು ನನಗೆ ಬಂದಿರುವ ಮಾಹಿತಿ ಇಲ್ಲ. ಬಂದಿದ್ದರೂ ನಾನು ಅದನ್ನ ಓದುವುದಿಲ್ಲ ಎಂದಿದ್ದಾರೆ. ನನ್ನ ಗಮನಕ್ಕೆ ಬಂದಂತೆ ಯಾವುದೇ ಕೆಟ್ಟ ಸಂದೇಶ ಬಂದಿಲ್ಲ ಎಂದು ರಾಗಿಣಿ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ಶಕ್ತಿದೇವತೆಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ
ಇನ್ನೂ ಕನ್ನಡದ ಹೆಸರಾಂತ ನಟಿಯರಾದ ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್ ನಿಂದ ಅಶ್ಲೀಲ ಸಂದೇಶ ಕಳುಹಿಸಿದ್ದನಂತೆ. ಪೊಲೀಸರ ವಿಚಾರಣೆ ವೇಳೆಯಲ್ಲಿ ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರದೋಶ್ ಮತ್ತು ವಿನಯ್ ನೀಡಿರುವ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಈ ನಟಿಯರಿಗೆ ಮಾತ್ರವಲ್ಲ, ಇನ್ನೂ ಹಲವು ನಟಿಯರಿಗೆ ಮೆಸೇಜ್ ಕಳುಹಿಸಿದ್ದ ಅನ್ನೋ ಮಾತು ಉಲ್ಲೇಖವಾಗಿದೆ.
ರೇಣುಕಾಸ್ವಾಮಿ ಮೊಬೈಲ್‌ನಲ್ಲಿ ನಾವು ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ಅಶ್ಲೀಲ ಮಸೇಜ್ ಕಳುಹಿಸಿದ್ದನ್ನು ನಾವು ನೋಡಿದ್ದೇವೆ ಎಂದು ಪೊಲೀಸರಿಗೆ ಆರೋಪಿಗಳು ಹೇಳಿದ್ದಾರೆ. ಅವರ ಮಾತುಗಳನ್ನು ಜಾರ್ಜ್‌ಶೀಟ್‌ನಲ್ಲೂ ದಾಖಲಿಸಲಾಗಿದೆ.