ಬೆಂಗಳೂರು: ನಟಿ ಅಮೂಲ್ಯ, ಜಗದೀಶ್ ಅವರ ನಿಶ್ಚಿತಾರ್ಥ ಸಮಾರಂಭ ಮಾರ್ಚ್ 6 ರಂದು ನಡೆಯಲಿರುವುದು ನಿಮಗೆ ಗೊತ್ತೇ ಇದೆ. ಈ ಮದುವೆಗೆ ಕಾರಣರಾದ ಶಿಲ್ಪಾ ಗಣೇಶ್ ದಂಪತಿಗೆ ಅಮೂಲ್ಯ ಈಗ ಧನ್ಯವಾದ ಹೇಳಿದ್ದಾರೆ.
ಅಮೂಲ್ಯ ಅವರು ಬಾವಿ ಪತಿ ಜೊತೆಗಿರುವ ಸೆಲ್ಫಿಯನ್ನು ಇದೇ ಮೊದಲ ಬಾರಿಗೆ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋದ ಜೊತೆ ಜಗದೀಶ್ ಅವರನ್ನು ಪರಿಚಯಿಸಿದ್ದಕ್ಕೆ ಗಣೇಶ ದಂಪತಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ.
Advertisement
ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ
Advertisement
ನನ್ನ ಜೀವನದಲ್ಲಿ ಬೆನ್ನೆಲುಬಾಗಿ ನಿಂತಿರುವ ನೀವಿಬ್ಬರೂ ನನಗೆ ಸಿಕ್ಕಿರುವುದು ನನ್ನ ಪುಣ್ಯ ಎಂದು ಅಮುಲ್ಯ ಶಿಲ್ಪಾ ದಂಪತಿಯನ್ನು ಹೊಗಳಿ ಮತ್ತೊಂದು ಗ್ರೂಪ್ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
Advertisement
ಗುರುವಾರ ಇವರಿಬ್ಬರ ಮದುವೆ ವಿಚಾರವಾಗಿ ಮಾತುಕತೆ ನಡೆದಿತ್ತು. ಮಾರ್ಚ್ 6ಕ್ಕೆ ಅಮೂಲ್ಯ ಜಗದೀಶ್ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಲಿದ್ದು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ.
Advertisement
ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು
Our first selfie together…thank u for Official_Ganesh sir n @ShilpaaGanesh ma'am for introducing love of my life???????? pic.twitter.com/MESgyx2ZmT
— Amulya (@Amulya_moulya) February 25, 2017