Bengaluru City
ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

ಬೆಂಗಳೂರು: ಕನ್ನಡದ ಸಾಕಷ್ಟು ಸಿನಿಮಾ ಧಾರಾವಾಹಿಗಳಲ್ಲಿ ಪೊಷಕ ನಟನಾಗಿ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ.
ವೇಣುಗೋಪಾಲ್ ಅವರು ಮಂಗಳವಾರ ಬೆಳಿಗ್ಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನರಾದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಕೊನೆಯದಾಗಿ ಶುದ್ಧಿ ಚಿತ್ರದಲ್ಲಿ ನಟಿಸಿದ್ದರು.
ವೇಣುಗೊಪಾಲ್ ಅವರು ಡಾ. ವಿಷ್ಣುವರ್ಧನ್ ಅವರ ಚಿತ್ರದಲ್ಲಿ ಹೆಚ್ಚಾಗಿ ನಟಿಸಿದ್ದರು. ಸೂರಪ್ಪ, ರಾಜನರಸಿಂಹ, ಕೋಟಿಗೊಬ್ಬ, ಡಕೋಟ ಎಕ್ಸ್ ಪ್ರೆಸ್ ಇನ್ನೂ ಅನೇಕರ ಚಿತ್ರದಲ್ಲಿ ನಟಿಸಿದ್ದು, ಮನೆತನ, ಜನನಿ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.
