ಕನ್ನಡ ಮತ್ತು ಪರಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಭಜರಂಗಿ ಲೋಕಿ ಈಗ ತೆಲುಗಿನ ಮತ್ತೊಂದು ಮೆಗಾ ಪ್ರಾಜೆಕ್ಟ್‌ನಲ್ಲಿ ನಟಿಸಿದ್ದಾರೆ. ಬಹುನಿರೀಕ್ಷಿತ ‘ವಿಶ್ವಂಭರ’ (Vishambhara) ಸಿನಿಮಾದಲ್ಲಿ ಭಜರಂಗಿ ಲೋಕಿ (Bhajarangi Loki) ಕೂಡ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೊಂಟ ಕಾಣಿಸುವಂತೆ ಹಸಿರು ಸೀರೆಯುಟ್ಟು ಬಂದ ಉರ್ಫಿ – ಒಳಉಡುಪು ಎಲ್ಲಿ ಹೋಯ್ತು ಅಂದ ನೆಟ್ಟಿಗರು
ಕನ್ನಡದ ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ (Ashika Ranganath) ಬಳಿಕ ಭಜರಂಗಿ ಲೋಕಿ ಅಲಿಯಾಸ್ ಸೌರವ್ ಲೋಕೇಶ್ (Saurav Lokesh) ಅವರು ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಈ ಚಿತ್ರ ವಿಶೇಷವಾಗಿ ರೆಡಿಯಾಗುತ್ತಿದೆ. ಸಿನಿಮಾದಲ್ಲಿ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ. ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಶೇಡ್‌ನಲ್ಲಿ ಅವರು ನಟಿಸಿದ್ದಾರೆ. ಆ ಪಾತ್ರ ಹೇಗಿರುತ್ತೆ ಎಂಬುದನ್ನು ಸಿನಿಮಾ ರಿಲೀಸ್ ಆದ್ಮೇಲೆ ಕಾದುನೋಡಬೇಕಿದೆ.
ಈ ಹಿಂದೆಯೂ ಕೂಡ ಚಿರಂಜೀವಿ, ರಾಮ್ ಚರಣ್ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿ ಭಜರಂಗಿ ಲೋಕಿ ನಟಿಸಿದ್ದರು. ಲೋಕಿ ಅವರ ಟ್ಯಾಲೆಂಟ್ ನೋಡಿಯೇ ಚಿತ್ರತಂಡ ಮತ್ತೊಮ್ಮೆ ಮೆಗಾಸ್ಟಾರ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದೆ.
ಇನ್ನೂ ಚಿರಂಜೀವಿ ಸಿನಿಮಾದಲ್ಲಿ ತ್ರಿಷಾ, ಆಶಿಕಾ, ಮೀನಾಕ್ಷಿ ಚೌಧರಿ, ಸೇರಿದಂತೆ ಅನೇಕರು ನಟಿಸಿದ್ದಾರೆ. ಮುಂದಿನ ವರ್ಷ ಜ.25ರಂದು ಸಿನಿಮಾ ಬಿಡುಗಡೆಯಾಗಲಿದೆ.