ದಿವಂಗತ ಪುನೀತ್ ರಾಜ್‌ಕುಮಾರ್ (Puneeth Rajkumar) ಮೇಲಿನ ಅಭಿಮಾನಕ್ಕಾಗಿ ಬೆಂಗಳೂರಿನ ಪಬ್‌ವೊಂದರಲ್ಲಿ ವಿದೇಶಿ ಮಹಿಳೆ ಹಾಡು ಹಾಡಿದ್ದಾರೆ. ಅಪ್ಪುಗಾಗಿ ‘ನೀನೇ ರಾಜಕುಮಾರ’ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದಾರೆ. ಪುನೀತ್ ಮೇಲಿನ ವಿದೇಶಿ ಮಹಿಳೆಯ ಪ್ರೀತಿ ಕಂಡು ಫ್ಯಾನ್ಸ್ ಕೊಂಡಾಡಿದ್ದಾರೆ. ಇದನ್ನೂ ಓದಿ:‘ಜೊತೆಯಲಿ ಇರುವೆನು ಹೀಗೆ ಎಂದು’ ಪತ್ನಿಗಾಗಿ ಹಾಡು ಹಾಡಿದ ಯಶ್
Advertisement
‘ನೀನೇ ರಾಜಕುಮಾರ’ ಹಾಡನ್ನ ಸ್ಟೈಲೀಶ್ ಆಗಿ ವಿದೇಶಿ ಮಹಿಳೆ ಹಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿದೇಶಿ ಮಹಿಳೆ ಹಾಡುವಾಗ ಪಬ್‌ನಲ್ಲಿ ಸೇರಿದ್ದ ಜನರು ಕೂಡ ಹಾಡು ಕೇಳಿ ಎಂಜಾಯ್ ಮಾಡಿದ್ದಾರೆ. ಇನ್ನೂ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬ ಈ ಹಿನ್ನೆಲೆ ಈ ತಿಂಗಳು ಪೂರ್ತಿ ಅಪ್ಪು ಹಾಡುಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸಲಿದ್ದಾರೆ.
Advertisement
Advertisement
ಅಂದಹಾಗೆ, ಇದೇ ಮಾರ್ಚ್ 14ರಂದು ಪುನೀತ್ ರಾಜ್‌ಕುಮಾರ್ ನಟಿಸಿದ್ದ ಅಪ್ಪು ಸಿನಿಮಾ ಮರುಬಿಡುಗಡೆ ಆಗುತ್ತಿದೆ. ನಟನ 50ನೇ ಹುಟ್ಟುಹಬ್ಬದ ಹಿನ್ನೆಲೆ ‘ಅಪ್ಪು’ ಸಿನಿಮಾ ರೀ ರಿಲೀಸ್ ಆಗಲಿದೆ.
Advertisement