ತಮನ್ನಾ ಭಾಟಿಯಾ ಸಿನಿಮಾದಲ್ಲಿ ವಸಿಷ್ಠ ಸಿಂಹ

Public TV
1 Min Read
vasista

ಟ ವಸಿಷ್ಠ ಸಿಂಹ (Vasista Simha) ಇದೀಗ ಕನ್ನಡದ ಜೊತೆ ಪರಭಾಷೆಗಳತ್ತ ಮುಖ ಮಾಡಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ನಟನೆಯ ಸಿನಿಮಾದಲ್ಲಿ ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ಹೆಂಡತಿ ಎಂಪಿ ಆಗಲಿ ಎಂಬ ಆಸೆಯಿದೆ- ಪಾಲಿಟಿಕ್ಸ್ ಬಗ್ಗೆ ಶಿವಣ್ಣ ಮಾತು

 

View this post on Instagram

 

A post shared by Vasishta N Simha (@imsimhaa)

ವಾರಣಾಸಿ ಕಾಶಿಯಲ್ಲಿ ‘ಓದೆಲಾ 2’ (Odela 2) ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ತಮನ್ನಾ ಭಾಟಿಯಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದು, ವಸಿಷ್ಠ ಸಿಂಹ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ಓದೆಲಾ ರೈಲ್ವೆ ಸ್ಟೇಷನ್‌ ಪಾರ್ಟ್‌ 2ಗೆ ಕಾಂತಾರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಕನ್ನಡದ ಪ್ರತಿಭೆ ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಂದಹಾಗೆ ಈ ಸಿನಿಮಾ ಬಹುಭಾಷೆಯಲ್ಲಿ ಮೂಡಿ ಬರಲಿದೆ.

ಸದ್ಯ ‘ಓದೆಲಾ 2’ ಚಿತ್ರದ ಮುಹೂರ್ತ ಕಾರ್ಯಕ್ರಮದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಸಿಷ್ಠ ಸಿಂಹ ನಟಿಸುತ್ತಿರುವ ‘ಓದೆಲಾ 2’ ಮುಹೂರ್ತ ಕಾರ್ಯಕ್ರಮದಲ್ಲಿ ಪತ್ನಿ ಹರಿಪ್ರಿಯಾ ಕೂಡ ಭಾಗಿಯಾಗಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ತಮನ್ನಾ ಭಾಟಿಯಾ ಜೊತೆ ಮೊದಲ ಬಾರಿಗೆ ವಸಿಷ್ಠ ನಟಿಸುತ್ತಿರುವ ಕಾರಣ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ. ವಸಿಷ್ಠ ಅವರ ಪಾತ್ರ ಮತ್ತು ಚಿತ್ರದ ಕಥೆ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡಿಸಿದೆ.

Share This Article