ಗುಳ್ಟು, ಹೊಯ್ಸಳ ಸಿನಿಮಾಗಳ ನಟನೆಯ ಮೂಲಕ ಮನೆಮಾತಾಗಿದ್ದ ಪ್ರತಿಭಾನ್ವಿತ ನಟ ನವೀನ್ ಶಂಕರ್ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುನಿರೀಕ್ಷಿತ ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾದಲ್ಲಿ ಕನ್ನಡದ ನಟ ನವೀನ್ ಶಂಕರ್ (Naveen Shankar) ನಟಿಸಿದ್ದಾರೆ. ‘ಸಲಾರ್’ ಚಿತ್ರದಲ್ಲಿನ ಪಾತ್ರದ ಬಗ್ಗೆ Exclusive ಆಗಿ ನವೀನ್ ಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ‘ಸಲಾರ್’ ಸಿನಿಮಾದಲ್ಲಿ ನವೀನ್ ಶಂಕರ್‌ಗೆ ಪ್ರಮುಖ ಪಾತ್ರವಿದ್ದು, ನೆಗೆಟಿವ್ ಶೇಡ್‌ನಲ್ಲಿ ನವೀನ್ ಅಬ್ಬರಿಸಿದ್ದಾರೆ. ಹೊಯ್ಸಳ ಚಿತ್ರದಲ್ಲಿನ ಬಲಿ ಪಾತ್ರದಲ್ಲಿ ನವೀನ್ ಖಡಕ್ ಆಗಿ ನಟಿಸುವ ಮೂಲಕ ಎಲ್ಲರ ಮನಗೆದ್ದಿದ್ದರು. ಹಾಗಾಗಿ ‘ಸಲಾರ್’ನಲ್ಲೂ ಅದಕ್ಕೂ ಮೀರಿದ ಪಾತ್ರವಿರೋದು ಖಚಿತವಾಗಿದೆ. ಸದ್ಯ ರಿಲೀಸ್ ಆಗಿರೋ ಸಲಾರ್ ಟ್ರೈಲರ್‌ನಲ್ಲಿ ನವೀನ್ ಶಂಕರ್ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ನವೀನ್ ಇರುವ ಸಣ್ಣ ತುಣುಕನ್ನ ಚಿತ್ರತಂಡ ಕೂಡ ರಿವೀಲ್ ಮಾಡಿದೆ. ಇದನ್ನೂ ಓದಿ:Salaar Trailer: ಒನ್ ಮ್ಯಾನ್ ಆರ್ಮಿಯಾಗಿ ಖಡಕ್ ಡೈಲಾಗ್ ಹೊಡೆದ ಪ್ರಭಾಸ್
ನನ್ನ ಪಾತ್ರಕ್ಕೆ ತೂಕವಿದೆ. ನೋಡವವರಿಗೆ ಪ್ರಭಾವ ಬೀರುವಂತಹ ಪಾತ್ರ ನನ್ನದು ಎಂದು ಹೇಳಬಹುದು. ಸಲಾರ್ 2ನೇ ಪಾರ್ಟ್ನಲ್ಲೂ ನನ್ನ ಪಾತ್ರ ಮುಂದುವರೆಬಹುದು ಅದರ ಬಗ್ಗೆ ನನಗೂ ಖಚಿತ ಮಾಹಿತಿ ಇಲ್ಲ. ‘ಸಲಾರ್’ ಪಾರ್ಟ್ 1ನಲ್ಲಿ ನಾನು ಅದೆಷ್ಟೇ ನಿಮಿಷ ನಟಿಸಿದರೂ ಪ್ರೇಕ್ಷಕರ ಮನಸ್ಸಿನಲ್ಲಿ ಪಾತ್ರ ಕೂರಲಿದೆ ಎಂಬ ನಂಬಿಕೆ ನನಗಿದೆ. ಖಳನಾಯಕನ ಪಾತ್ರದಲ್ಲಿ ನಾನು ನಟಿಸಿದ್ದೀನಿ ಎಂದು ನವೀನ್ ಮಾತನಾಡಿದ್ದಾರೆ.
ಇಲ್ಲಿ ನಾನು ಯಾರಿಗೆ ವಿಲನ್ ಅನ್ನೋದು ಪ್ರೇಕ್ಷಕರಿಗೂ ಒಂದು ಸರ್ಪ್ರೈಸ್ ಇರಲಿ. ‘ಸಲಾರ್’ ಸಿನಿಮಾ ನೋಡಲಿ, ನೆಗೆಟಿವ್ ಶೇಡ್ ಕೊಟ್ಟಿದ್ದರೂ ನನ್ನ ಪಾತ್ರ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ತೆರೆಯ ಮೇಲೆ ಖಂಡಿತಾ ನೋಡುವವರಿಗೆ ಮೋಡಿ ಮಾಡುತ್ತದೆ ಎಂದು ಖುಷಿಯಿಂದ ‘ಸಲಾರ್’ ಚಿತ್ರದಲ್ಲಿನ ಪಾತ್ರದ ಬಗ್ಗೆ ನವೀನ್ ಶಂಕರ್ ಹೇಳಿದ್ದಾರೆ. ಹಾಗಾದ್ರೆ ಪ್ರಭಾಸ್‌ಗೆ (Prabhas) ನವೀನ್ ಶಂಕರ್ ಸೆಡ್ಡು ಹೊಡೆಯುತ್ತಾರಾ? ಎಂಬುದಕ್ಕೆ ಇದೇ ಡಿಸೆಂಬರ್ 22ಕ್ಕೆ ಸಿಗಲಿದೆ. ‘ಸಲಾರ್’ ಬಹುಭಾಷೆಗಳಲ್ಲಿ ತೆರೆಕಾಣಲಿದೆ.
‘ಸಲಾರ್’ ಸಿನಿಮಾದಲ್ಲಿ ಕನ್ನಡದ ಅನೇಕ ಕಲಾವಿದರಿಗೆ ಹೊಂಬಾಳೆ ಸಂಸ್ಥೆ ಅವಕಾಶ ಕೊಟ್ಟಿದೆ. ಇನ್ನೂ ನವೀನ್ ಶಂಕರ್ ಅದ್ಭುತ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಬಹುಭಾಷೆಗಳಲ್ಲಿ ಕನ್ನಡದ ಯುವ ನಟ ನವೀನ್ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.
ಶೃತಿ ನಾಗೇಶ್, ಪಬ್ಲಿಕ್ ಟಿವಿ ಡಿಜಿಟಲ್