ಪ್ರಭಾಸ್ ನಟನೆಯ ‘ಸಲಾರ್’ (Salaar) ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಪ್ರಭಾಸ್ ಮಾಸ್ & ಕ್ಲಾಸ್ ಡೈಲಾಗ್‌ಗೆ ಡಾರ್ಲಿಂಗ್ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಎಂದೂ ಕಾಣಿಸಿಕೊಂಡಿರದ ರಕ್ತಸಿಕ್ತ ಅವತಾರದಲ್ಲಿ ಪ್ರಭಾಸ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
Advertisement
ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣ, ಪ್ರಶಾಂತ್ (Prashanth Neel) ನಿರ್ದೇಶನದ ಸಲಾರ್‌ನಲ್ಲಿ ಪ್ರಭಾಸ್- ಪೃಥ್ವಿರಾಜ್ ಕಾಂಬೋ ಕಣ್ತುಂಬಿಕೊಳ್ಳೋಕೆ ಮಸ್ತ್ ಆಗಿದೆ. ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ನಟಿಸುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಟ್ರೈಲರ್ ಝಲಕ್‌ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ ಹಾಡಿಗೆ ಹೆಜ್ಜೆ ಹಾಕಿದ ನಟಿ ರಾಗಿಣಿ ದ್ವಿವೇದಿ
Advertisement
Advertisement
‘ಸಲಾರ್’ ಟ್ರೈಲರ್ ಇಬ್ಬರು ಸ್ನೇಹಿತರ ಕಥೆ ಎಂಬುದನ್ನು ಸಾರಿ ಹೇಳುತ್ತಿದೆ. ಟ್ರೈಲರ್ ಶುರುವಾಗುವುದೇ ಇಬ್ಬರ ಮೂಲಕ. ಸ್ನೇಹಿತನಿಗಾಗಿ ಏನಾದರೂ ಮಾಡುವ ‘ದೇವ’ನ (ಪ್ರಭಾಸ್) ಕೋಪ, ತ್ಯಾಗದಿಂದ ಅವರ ಸ್ನೇಹ ಅರಿವು ಮೂಡಿಸುವ ಪ್ರಯತ್ನ ಪ್ರಶಾಂತ್ ನೀಲ್ ಮಾಡಿಸಿದ್ದಾರೆ. ದೂರದ ಒಂದು ಪ್ರದೇಶದಲ್ಲಿ ಖಾನ್ಸಾರಾ ಎಂಬ ಸಾಮ್ರಾಜ್ಯದ ಸುತ್ತ ಕಥೆ ಕಟ್ಟಲಾಗಿದೆ. ತನ್ನ ನಂತರ ತನ್ನ ಮಗ ವರದರಾಜ ಮನ್ನಾರ್ (ಪೃಥ್ವಿರಾಜ್) ಈ ಕುರ್ಚಿಯಲ್ಲಿ ಕೂರಬೇಕು ಎಂಬ ಆಸೆ ಹೊತ್ತ ರಾಜ ಮನ್ನಾರ್ ಮತ್ತು ಈ ಸಾಮ್ರಾಜ್ಯದ ಕುರ್ಚಿಗಾಗಿ ನಡೆಯುವ ಕುತಂತ್ರವನ್ನು ಟ್ರೈಲರ್‌ನಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ತನ್ನ ಸಾಮ್ರಾಜ್ಯಕ್ಕೆ ಎಲ್ಲಾ ಕಡೆಯಿಂದಲೂ ವಿರೋಧಿಗಳು ದಾಳಿ ಮಾಡಿದಾಗ ಸ್ನೇಹಿತನನ್ನು (ಪ್ರಭಾಸ್) ಕರೆಯುವ ವರದ. ವರದನ ಮೈ ಮುಟ್ಟಲು ಬಿಡದೇ ಎಲ್ಲರನ್ನು ಸದೆ ಬಡಿಯುವ ಒನ್ ಮ್ಯಾನ್ ಆರ್ಮಿಯಾಗಿ ದೇವ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:Breaking: ‘ಸಲಾರ್’ ಟ್ರೈಲರ್ ಔಟ್- ರಕ್ತಸಿಕ್ತ ಅವತಾರದಲ್ಲಿ ಪ್ರಭಾಸ್ ಖಡಕ್ ಎಂಟ್ರಿ
Advertisement
ಇಲ್ಲಿಯೂ ಹಿಂಸೆ ಎನ್ನುವುದು, ರಕ್ತಪಾತ ಕಣ್ಣೂ ಕುಕ್ಕುವಂತಿದೆ. ಇಲ್ಲಿ ಕಪ್ಪು- ಬಿಳುಪಿನ ಆಟವಿದೆ. ಪ್ರಶಾಂತ್ ನೀಲ್ ಗರಡಿಯಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಬ್ಬರಿಸಿದ್ದಾರೆ. ಸ್ನೇಹಿತನ ಮೈ ಮೇಲೆ ಒಂದು ಗೆರೆ ಬೀಳದಂತೆ ಕಾಯುವ ಸ್ನೇಹಿತನಾಗಿ ದೇವ ನಿಂತಿದ್ದಾರೆ. ನಿನ್ನಾ ಯಾರು ಮುಟ್ಟಬಾರದು ಅಷ್ಟೇ ಎಂದು ವರದನಿಗೆ ಕಾವಲುಗಾರನಾಗಿ ದೇವ ಸಾಥ್ ನೀಡಿದ್ದಾರೆ. ಒನ್ ಮ್ಯಾನ್ ಆರ್ಮಿಯಾಗಿ ಪ್ರಭಾಸ್ ಘರ್ಜಿಸಿದ್ದಾರೆ.
ದೇವ ಖಾನ್‌ಸಾರ್‌ಗೆ ಕಾಲಿಟ್ಟಿದ್ದೇ ತಡ ಅಲ್ಲಿ ರಕ್ತಪಾತವೇ ನಡೆಯುತ್ತದೆ. ನಾನು ಕಂಡಿದ್ದೆಲ್ಲ ಬೇಕು ಎನ್ನುವ ದುರಾಸೆ ವರದರಾಜ್‌ದು, ನೀನು ಕೇಳಿದ್ದನ್ನೆಲ್ಲ ಕೊಡುವೆ ಎಂಬ ಪ್ರೇಮ ದೇವನದ್ದು. ಇವರಿಬ್ಬರೂ ಖಾನ್‌ಸಾರ್ ಅನ್ನು ಹೇಗೆ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ, ಹೇಗೆ ಇತರೆ ಗ್ಯಾಂಗ್‌ಗಳನ್ನು ನಾಶ ಮಾಡುತ್ತಾರೆ. ಕೊನೆಗೆ ಇಬ್ಬರ ಸ್ನೇಹ ಏನಾಗುತ್ತದೆ ಎಂಬುದು ಕತೆ.
ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ನಿರ್ಮಿಸಲಾಗಿದೆ. ವಿದೇಶಿ ಹೆಲಿಕಾಪ್ಟರ್‌ಗಳು, ಭಾರಿ ವಾಹನಗಳ ಬಳಕೆ ಮಾಡಲಾಗಿದೆ. ಪ್ರಭಾಸ್ ಅನ್ನು ಸಖತ್ ಮಾಸ್ ಆಗಿ ತೋರಿಸಲಾಗಿದೆ. ಕಟ್ಟುಮಸ್ತು ದೇಹದ ಪ್ರಭಾಸ್, ವೈರಿಗಳನ್ನು ತುಂಡು-ತುಂಡಾಗಿ ಕತ್ತರಿಸುತ್ತಿದ್ದಾರೆ. ಟ್ರೈಲರ್‌ಗೆ ನೀಡಿರುವ ಸಂಗೀತವು ಖಡಕ್ ಆಗಿದೆ. ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಕನ್ನಡದ ಪ್ರತಿಭೆಗಳಿಗೆ ಅವಕಾಶ ನೀಡಿರೋದು ವಿಶೇಷ. ರತ್ನನ್ ಪ್ರಪಂಚ ಹೀರೋ ಪ್ರಮೋದ್, ‘ಗುಳ್ಟು’ ನಟ ನವೀನ್ ಶಂಕರ್, ಗರುಡ ಖ್ಯಾತಿಯ ರಾಮಚಂದ್ರ ನಟಿಸಿದ್ದಾರೆ. ಇನ್ನೂ ಪ್ರಭಾಸ್ ಪಾತ್ರಕ್ಕೆ ಕನ್ನಡದ ನಟ ವಸಿಷ್ಠ ಸಿಂಹ ಕಂಠದಾನ ಮಾಡಿದ್ದಾರೆ. ಉಳಿದಂತೆ ನಾಯಕಿ ಶ್ರುತಿ ಹಾಸನ್, ಜಗಪತಿ ಬಾಬು, ಹಲವರು ನಟಿಸಿದ್ದಾರೆ.